ಕರ್ನಾಟಕ

ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ: ಗುರೂಜಿಗೆ ಸಿಐಡಿ ಭೈರಿಗೆ

Pinterest LinkedIn Tumblr

shiva-kumarclrಬೆಂಗಳೂರು,ಮೇ.೪-ಪಿಯುಸಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಕಿಂಗ್‌ಪಿನ್ ಶಿವಕುಮಾರ್ ಅಲಿಯಾಸ್ ಗೂರೂಜಿಯನ್ನು ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿ ಮಹತ್ವದ ಮಾಹಿತಿ ಕಲೆಹಾಕಿದ್ದಾರೆ.
ವಿಚಾರಣೆಯಲ್ಲಿ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಶಿವಕುಮಾರ್ ಪುತ್ರ ಹಾಗೂ ಭಾಮೈದ ಎಲ್ಲಿ ತಲೆಮರೆಸಿಕೊಂಡಿದ್ದಾರೆ ಎನ್ನುವ ಮಾಹಿತಿ ಪಡೆದುಕೊಮಢು ಅವರಿಬ್ಬರ ಬಂಧನಕ್ಕಾಗಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.
ಆರೋಪಿ ಶಿವಕುಮಾರ್‌ನನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿ ೧೦ ದಿನಗಳ ಕಾಲ ವಶಕ್ಕೆ ಪಡೆದುಕೊಂಡಿರುವ ಸಿಐಡಿ ಅಧಿಕಾರಿಗಳು ಅಕ್ರಮ ಆಸ್ತಿಪಾಸ್ತಿ ಗಳಿಕೆ ಹೊಂದಿದ್ದ ಪ್ರೇಯಸಿಯರು ಇನ್ನಿತರ ಮಾಹಿತಿ ಕಲೆಹಾಕಿದ್ದಾರೆ.
ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್‌ರೆಡ್ಡಿ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶಿವಕುಮಾರ್ ಹೊಂದಿದ್ದ ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ಕುರಿತು ವಿಸ್ತೃತ ವಿಚಾರಣೆ ನಡೆಸಿದ್ದಾರೆ ಪ್ರಕರಣದಲ್ಲಿ ಭಾಗಿಯಾಗಿರುವ ಬಂಧಿತ ೧೨ ಮಂದಿಯಲ್ಲದೇ ಇನ್ನೂ ಉಳಿದವರ ಮಾಹಿತಿ ಸಂಗ್ರಹಿಸತೊಡಗಿದ್ದಾರೆ.
ಕಳೆದ ೧೦ ವರ್ಷಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆ ದಂಧೆ ನಡೆಸುತ್ತಿರುವುದು ದಂಧೆಗೆ ಸಹಕಾರಿಯಾಗಿದ್ದ ಅಯಾ ಮಂಡಳಿಯ ಉನ್ನತ ಅಧಿಕಾರಿಗಳು ಹಾಗೂ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕದ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ.
ಶಿವಕುಮಾರ್ ಮೊಬೈಲ್ ಕಾಲ್ ಲಿಸ್ಟ್ ಗಳನ್ನಿಟ್ಟುಕೊಂಡು ಯಾರ್‍ಯಾರಿಗೆ ಕರೆ ಮಾಡಿರುವುದು ಹೆಚ್ಚು ಕರೆ ಮಾಡಿರುವುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ರಾಜ್ಯದಲ್ಲಿ ೮ ಟ್ಯುಟೋರಿಯಲ್ ಗಳನ್ನು ನಡೆಸುತ್ತಿರುವುದು ಅಲ್ಲಿನ ವಸೂಲಿ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ.
ಶಿವಕುಮಾರ್ ವಿರುದ್ಧ ಈ ಹಿಂದೆಯೇ ಪ್ರಶ್ನೆ ಪತ್ರಿಕೆ ಬಯಲು ಪ್ರಕರಣದಲ್ಲಿ ತುಮಕೂರಿನಲ್ಲಿ ೨, ಬೆಂಗಳೂರಿನಲ್ಲಿ ೪ ಪ್ರಕರಣಗಳು ದಾಖಲಾಗಿತ್ತು. ಪ್ರಸ್ತುತ ಎರಡು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ.

Write A Comment