ಕರ್ನಾಟಕ

ಯುವತಿಯನ್ನ ಕಿಡ್ನ್ಯಾಪ್ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದ ಕಾಮುಕ ಪೋಲಿಸ್ ಬಲೆಗೆ

Pinterest LinkedIn Tumblr

AKSHAY-ARREST

ಬೆಂಗಳೂರು: ನಗರದ ಕತ್ರಿಗುಪ್ಪೆಯಲ್ಲಿ ಯುವತಿಯನ್ನು ನಡು ರಸ್ತೆಯಲ್ಲಿ ಎತ್ತಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದ ಕೀಚಕ ಅರೆಸ್ಟ್ ಆಗಿದ್ದಾನೆ.

ಬಂಧಿತ ಆರೋಪಿ 24 ವರ್ಷದ ಅಕ್ಷಯ್ ಅಂತಾ ಗೊತ್ತಾಗಿದೆ. ಯುವತಿಯನ್ನ ಅಪಹರಿಸಿದ್ದ ಸಿಸಿಟಿವಿ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿ ರಾಷ್ಟ್ರವ್ಯಾಪಿ ಸುದ್ದಿಯಾದ ಮೇಲೆ ಮಿಂಚಿನ ಕಾರ್ಯಾಚರಣೆ ನಡೆಸಿದ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಕ್ಷಯ್ ಕತ್ರಿಗುಪ್ಪೆಯಲ್ಲಿ ಏಪ್ರಿಲ್ 23 ರಂದು ರಾತ್ರಿ 10 ಗಂಟೆ ಸುಮಾರಿಗೆ ಯುವತಿಯನ್ನ ಕಿಡ್ನಾಪ್ ಮಾಡಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ರೌಡಿಶೀಟರ್ ಹಿನ್ನೆಲೆ ಇರುವ ಅಕ್ಷಯ್ ಮೇಲೆ ಹಲವು ಕೇಸ್‍ಗಳು ಕೂಡಾ ಇವೆ. ಈತ ಈ ಹಿಂದೆ ಜೈಲಿಗೂ ಹೋಗಿ ಬಂದಿದ್ದ ಎಂದು ತಿಳಿದುಬಂದಿದೆ.

Write A Comment