ಕರ್ನಾಟಕ

‘ಡಿಕ್ಟೇಟರ್‌’ ತಡ :ಎಸ್‌ ನಾರಾಯಣ್‌ ವಿರುದ್ಧ ಹುಚ್ಚ ವೆಂಕಟ್‌ ಕಿಡಿ

Pinterest LinkedIn Tumblr

venkatಬೆಂಗಳೂರು : ತಮ್ಮ ವಿಚಿತ್ರ ಮ್ಯಾನರಿಸಂ , ಬಿಗ್‌ ಬಾಸ್‌ ಗಲಾಟೆ , ಡೈಲಾಗ್‌ಗಳಿಂದ ಫ‌ುಲ್‌ ಫೇಮಸ್‌ ಆಗಿ ಫ‌ುಲ್‌ ಫೇಮಸ್‌ ಆಗಿದ್ದ ಹುಚ್ಚ ವೆಂಕಟ್‌ ಮತ್ತೆ ಡೈಲಾಗ್‌ ಹೊಡೆದು ಸುದ್ದಿಯಾಗಿದ್ದಾರೆ. ಈ ಬಾರಿ ಅವರು ನಿರ್ದೇಶಕ ಎಸ್‌.ನಾರಾಯಣ್‌ ಅವರ ವಿರುದ್ದ ಕಿಡಿ ಕಾರಿದ್ದಾರೆ.

ಎಸ್‌ .ನಾರಾಯಣ್‌ ಅವರು ಹುಚ್ಚ ವೆಂಕಟ್‌ ಅವರೊಂದಿಕೆ ‘ಡಿಕ್ಟೇಟರ್‌’ ಚಿತ್ರ ಘೋಷಿಸಿದ್ದರು. ಆದರೆ ಚಿತ್ರದ ಚಿತ್ರೀಕರಣ ತಡವಾಗಿತ್ತು. ಅದಕ್ಕಾಗಿ  ವೆಂಕಟ್‌ ಕಿಡಿ ಕಾರಿದ್ದು ಚಿತ್ರದಲ್ಲಿ ನಟಿಸುವುದಿಲ್ಲ ಎಂದಿದ್ದಾರೆ.

ಶನಿವಾರ ತಮ್ಮ ಎಂದಿನ ಶೈಲಿಯಲ್ಲೇ ಮಾತನಾಡಿದ ಹುಚ್ಚ ವೆಂಕಟ್‌ ನಾನು ಸಾಹಸಸಿಂಹ ಡಾ. ವಿಷ್ಣುವರ್ಧನ್‌ ಬಿಟ್ಟರೆ ಹ್ಯಾಟ್ರಿಕ್‌ ಹೀರೊ ಶಿವಣ್ಣನ ಅಭಿಮಾನಿ ..ಈ ನಾರಾಯಣ್‌ಗೆಲ್ಲಾ ಕ್ಯಾರ್‌ ಮಾಡಲ್ಲ ..ನನ್‌ ಮಗಂದ್‌.. ಎಂದರು.

ನಾನು ಯಾರಿಗೂ ತಲೆ ತಗ್ಗಿಸಿ ಇರುವುದಿಲ್ಲ..ಬೇಕಾದ್ರೆ ನನ್‌ ಬ್ಯಾನರ್‌ನಲ್ಲೇ ಫಿಲ್ಮ್ ಮಾಡಿ , ಅಭಿಮಾನಿಗಳನ್ನು ರಂಜಿಸುತ್ತೇನೆ ಎಂದರು.

ಎಸ್‌ ನಾರಾಯಣ್‌ ಅವರು ನನ್ನನ್ನು 45 ದಿನ ಕಾಯಿಸಿ ಸಮಯ ಹಾಳು ಮಾಡಿದ್ದಾರೆಎಂದರು.
-ಉದಯವಾಣಿ

Write A Comment