ಕರ್ನಾಟಕ

ಮೈಸೂರಿನಲ್ಲಿ ಸುಡಾನ್ ವಿದ್ಯಾರ್ಥಿಗಳ ಪುಂಡಾಟ: ವೈದ್ಯರ ಮೇಲೆ ಹಲ್ಲೆ

Pinterest LinkedIn Tumblr

sudan

ಮೈಸೂರು: ಅಡ್ಡಾದಿಡ್ಡಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ವೈದ್ಯರ ಮೇಲೆ ವಿದೇಶಿ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ನಗರದ ಅಗ್ರಹಾರದ ಬಳಿ ನಡೆದಿದೆ.

ಸುಡಾನ್ ದೇಶದ ಮೂವರು ವಿದ್ಯಾರ್ಥಿಗಳು ನಿನ್ನೆ ತಡರಾತ್ರಿ ವೈದ್ಯ ಕಾರ್ತಿಕ್ ಉಡುಪಾ ಅವರ ಕಾರನ್ನು ಓವರ್‍ಟೇಕ್ ಮಾಡಲು ಹೋಗಿ ಅವರ ಕಾರಿಗೆ ಡಿಕ್ಕಿ ಹೊಡೆದಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೇ ಹಲ್ಲೆ ನಡೆಸಿದ್ದಾರೆ.

ಘಟನೆಯಲ್ಲಿ ಕಾರ್ತಿಕ್ ಕಣ್ಣಿಗೆ ಬಲವಾಗಿ ಹೊಡೆದು ಟೀಶರ್ಟ್ ಹರಿದು ಹಾಕಿದ್ದಲ್ಲದೇ, ಅವರ ಪತ್ನಿ ಮೇಲೂ ಹಲ್ಲೆಗೆ ಯತ್ನಿಸಿದ್ದಾರಂತೆ. ಅಲ್ಲದೇ ಕಾರ್ತಿಕ್ ಕಾರಿನಲ್ಲಿದ್ದ ಸ್ನೇಹಿತ ಡಾ. ದೀಪಕ್ ಮೇಲೂ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಸಂಬಂಧ ಮೈಸೂರಿನ ಕೆಆರ್ ಠಾಣೆಯಲ್ಲಿ ಮೂವರ ವಿರುದ್ಧ ದೂರು ನೀಡಿದ್ದಾರೆ. ಇತ್ತ ಪ್ರಕರಣದಿಂದ ನುಣುಚಿಕೊಳ್ಳಲು ವಿದ್ಯಾರ್ಥಿಗಳು ಸುಖಾಸುಮ್ಮನೇ ಬಟ್ಟೆ ಹಿಡಿದು ಎಳೆದಾಡಿದ್ದಾರೆಂದು ದೂರು ನೀಡಿದ್ದಾರೆ. ಈ ಪ್ರಕರಣ ಕುರಿತು ಖುದ್ದು ಡಿಸಿಪಿ ಶೇಖರ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆ ಪಡೆದಿದ್ದಾರೆ.

Write A Comment