ಕರ್ನಾಟಕ

ಮ್ಯಾಟ್ರಿಮೋನಿಯಲ್‍ನಲ್ಲಿ ವರನ್ವೇಷಣೆ ಮಾಡುವ ಯುವತಿಯರೇ ಎಚ್ಚರ! ಇಲ್ಲೊಬ್ಬ ಚಪಲಚನ್ನಿಗರಾಯ ಮೂರು ಮದುವೆ ಆಗಿ ನಾಲ್ಕನೇ ಮದುವೆಗೆ ಹೊರಟಿದ್ದಾನೆ….ಎರಡು ಮಕ್ಕಳೊಂದಿಗೆ ಪತ್ನಿ ಬೀದಿಗೆ

Pinterest LinkedIn Tumblr

21

ಬೆಂಗಳೂರು: ಯುವತಿಯರೇ ಮ್ಯಾಟ್ರಿಮೋನಿಯಲ್, ಫೇಸ್‍ಬುಕ್‍ನಲ್ಲಿ ಫ್ರೆಂಡ್ ಮಾಡಿಕೊಳ್ಳೊ ಮುನ್ನ ಜಾಗ್ರತೆ ಇರಲಿ. ಯಾಕಂದ್ರೆ ಅಮಾಯಕರನ್ನ ಬುಟ್ಟಿ ಹಾಕಿಕೊಳ್ಳಲು ಅಂತಾನೇ ಕೆಲವು ನೀಚರು ಕಾಯ್ತಾ ಇರುತ್ತಾರೆ. ಸ್ವಲ್ಪ ಯಾಮಾರಿದರೂ ಭವಿಷ್ಯವೇ ಹಾಳಾಗುತ್ತದೆ.

ಇತ್ತೀಚೆಗೆ ಯುವತಿಯರು ಫೇಸ್‍ಬುಕ್, ಮ್ಯಾಟ್ರಿಮೋನಿಯಲ್‍ನಂತಹ ಸಾಮಾಜಿಕ ಜಾಲತಾಣಗಳ ಮೊರೆ ಹೋಗಿ ತಮ್ಮ ಸುಂದರ ಜೀವನವನ್ನೇ ಹಾಳುಮಾಡಿಕೊಳ್ತಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ಬೆಂಗಳೂರಿನಲ್ಲಿ ಇಂಟೀರಿಯ್ ಡಿಸೈನರ್ ಆಗಿದ್ದ ಮಹಿಳೆ ಕಳೆದ 5 ವರ್ಷಗಳ ಹಿಂದೆ ಭಾರತ್ ಮ್ಯಾಟ್ರಿಮೋನಿಯಲ್‍ಗೆ ವರನ ಅನ್ವೇಷಣೆಗೆ ಅಂತ ಡೀಟೈಲ್ಸ್ ಕೊಟ್ಟಿದ್ರು.

ಮಹಿಳೆಯನ್ನು ಹುಡುಕಿದ ಖತರ್ನಾಕ್ ಐಬಿಎಂ ಉದ್ಯೋಗಿ ಗಿರೀಶ್ ಪ್ರಸಾದ್, ಇವರನ್ನು ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದ. ಈ ಮಹಿಳೆ ಕೂಡಾ ತಾಯಿಯಿಲ್ಲದ ಹೆಣ್ಣು ಮಗಳು, ಹೀಗಾಗಿ ಒಳ್ಳೆ ವರ ಸಿಕ್ಕಿದ ಅಂತ ಭಾವಿಸಿ ಇವರು ಮದುವೆಯೂ ಆದರು. ಆದ್ರೆ ಮದುವೆಯಾಗಿ ಒಂದು ವರ್ಷದ ಬಳಿಕ ಐಬಿಎಂ ಗಂಡನ ನಿಜಸ್ವರೂಪ ಬಯಲಾಗಿದೆ. ಅದೇನಪ್ಪಾ ಅಂದ್ರೆ ಪತಿ ಗಿರೀಶ್ ಪ್ರಸಾದ್‍ಗೆ ಈಗಾಗಲೇ ಎರಡು ಮದುವೆಯಾಗಿದ್ದು ಇವರು ಮೂರನೇ ಹೆಂಡತಿಯಾಗಿದ್ದಾರೆ.

ಯಾವಾಗ ತನ್ನ ಗಂಡನಿಗೆ ಈಗಾಗಲೇ ಎರಡು ಮದುವೆಯಾಗಿದೆ ಅಂತ ಗೊತ್ತಾಯ್ತೋ ದಂಪತಿ ನಡುವೆ ಕಲಹ ಉಂಟಾಗಿದೆ. ಆಗಿದ್ದು ಆಯ್ತು ಹೇಗಾದ್ರು ಮಾಡಿ ಇವನ ಜೊತೆನೆ ಬದುಕೋಣ ಅಂತ ಇವರು ನಿರ್ಧರಿಸಿದ್ರೆ, ಇತ್ತ ಚಪಲಚನ್ನಿಗರಾಯ ಐಬಿಎಂ ಗಂಡ ಇನ್ನೊಂದು ಮದುವೆಯಾಗೋಕೆ ಹೊರಟಿದ್ದಾನಂತೆ. ಅಲ್ಲದೇ ನೀನು ಬೇಡ ಅಂತಿದ್ದಾನಂತೆ. ಈಗ ತನ್ನ ಎರಡು ಮುದ್ದು ಮಕ್ಕಳ ಜೊತೆ ಈ ಮಹಿಳೆ ಬೀದಿಪಾಲಾಗಿದ್ದಾರೆ.

ದಂಪತಿ ನಡುವಿನ ಕಲಹ ಈಗಾಗಲೇ ಹನುಮಂತನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಈ ಮಹಿಳೆ ಜೀವನವನ್ನ ಹಾಳು ಮಾಡಿರುವ ಐಬಿಎಂ ಚಪಲಚನ್ನಿಗರಾಯನಿಗೆ ಪೊಲೀಸರು ಅದೇನೂ ಶಿಕ್ಷೆ ಕೊಡ್ತಾರೋ ಎನ್ನುವುದನ್ನು ಕಾದು ನೋಡ್ಬೇಕು.

Write A Comment