ಕರ್ನಾಟಕ

ಡಿಕ್ಟೇಟರ್ ಚಿತ್ರದಿಂದ ಹೊರ ಬಂದ ವೆಂಕಟ್; ಹೊರಬರಲು ಕಾರಣ…!

Pinterest LinkedIn Tumblr

venkat

ಬೆಂಗಳೂರು: ಎಸ್ ನಾರಾಯಣ್ ನಿರ್ದೇಶನದ ಡಿಕ್ಟೇಟರ್ ಚಿತ್ರದಿಂದ ನಟ ವೆಂಕಟ್ ಅವರು ಹೊರ ಬಂದಿದ್ದಾರೆ. ಕಾಲ್‍ಶೀಟ್ ಪಡೆದು ನನ್ನ ಸಮಯ ವ್ಯರ್ಥ ಮಾಡಿದ್ದಕ್ಕೆ ನಾನು ಚಿತ್ರದಿಂದ ಹೊರ ಬಂದಿದ್ದೇನೆ ಎಂದು ವೆಂಕಟ್ ಹೇಳಿದ್ದಾರೆ.

ಯಾರಿಗೂ ನಾನು ತಗ್ಗಿ-ಬಗ್ಗಿ ನಡೆಯುವುದಿಲ್ಲ. ಹೀಗಾಗಿ ನನ್ನಿಷ್ಟದಂತೆ ನನ್ ಬ್ಯಾನರ್‍ನ ಚಿತ್ರಗಳಲ್ಲಿ ಅಭಿನಯಿಸುತ್ತೇನೆ. ಡಿಕ್ಟೇಟರ್ ಚಿತ್ರಕ್ಕೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು. ಆ ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ ಎಂಬ ಕಾರಣಕ್ಕೆ ಸಂತೋಷಗೊಂಡಿದ್ದರು. ಎಸ್.ನಾರಾಯಣ ನಿರ್ದೇಶನದ ಚಿತ್ರ ಎಂದು ಸಂತೋಷಗೊಂಡಿರಲಿಲ್ಲ ಎಂದು ತಿಳಿಸಿದರು.

ಈ ವೇಳೆ ಶಿವಣ್ಣರ ಸರಳತೆ ಮೆಚ್ಚಿ ವೆಂಕಟ್ ಹೊಗಳಿದರು. ಪೊರ್ಕಿ ಹುಚ್ಚ ವೆಂಕಟ್ ಚಿತ್ರೀಕರಣ ಸ್ಥಳಕ್ಕೆ ಭೇಟಿ ಕೊಟ್ಟಿದ್ದರು.ನನ್ ಮಗಂದ್ ಡೈಲಾಗ್ ಅನ್ನು ಶಿವಣ್ಣ ಮೆಚ್ಚಿದ್ದಾರೆ. ಸ್ಯಾಂಡಲ್‍ವುಡ್‍ನಲ್ಲಿ ವಿಷ್ಣುವರ್ಧನ್ ಬಿಟ್ಟರೆ ನಾನು ಶಿವಣ್ಣ ಅಭಿಮಾನಿ ಎಂದು ಹೇಳಿದರು.

Write A Comment