ಕರ್ನಾಟಕ

ಮೊಬೈಲ್‌ಗಾಗಿ ಅಜ್ಜಿ ಹತ್ಯೆ

Pinterest LinkedIn Tumblr

crimeಬೆಂಗಳೂರು, ಏ. ೨೬ – ಚಾರ್ಜರ್‌ಗೆ ಹಾಕಿದ್ದ ಮೊಬೈಲ್ ಬೀಳಿಸಿದ ಅಜ್ಜಿಯನ್ನು ಆಕ್ರೋಶಗೊಂಡ ಮೊಮ್ಮಗ ರಿಪೀಸ್‌ನಿಂದ ಹೊಡೆದು ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬನಶಂಕರಿಯ ಕದಿರೇನಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕದಿರೇನಹಳ್ಳಿಯ ಸಪಲಮ್ಮ ರಸ್ತೆಯ ಲಕ್ಷ್ಮಮ್ಮ(೯೦)ಕೊಲೆಯಾದವರು.ಕೃತ್ಯ ವೆಸಗಿದ ಮೊಮ್ಮಗ ಶಿವರಾಜ್(೨೨)ಪರಾರಿಯಾಗಿದ್ದಾನೆ.
ಕೂಲಿ ಕೆಲಸ ಮಾಡುತ್ತಿದ್ದ ಶಿವರಾಜ ರಾತ್ರಿ ೮ರ ವೇಳೆ ಮನೆಗೆ ಬಂದು ಮೊಬೈಲ್‌ನ್ನು ಚಾರ್ಜರ್‌ಗೆ ಕುಳಿತಿದ್ದಾಗ ಕೋಲು ಹಿಡಿದುಕೊಂಡು ನಡೆದುಕೊಂಡು ಬಂದ ಅಜ್ಜಿ ಲಕ್ಷ್ಮಮ್ಮ ಅವರ ಕೋಲಿಗೆ ಚಾರ್ಜರ್ ವೈರ್ ಸಿಕ್ಕಿ ಹಾಕಿಕೊಂಡು ಮೊಬೈಲ್ ಕೆಳಗೆಬಿದ್ದು ಹೊಡೆದುಹೋಗಿದೆ.
ಮೊಬೈಲ್ ಹೊಡೆದು ಹೋಗಿದ್ದನ್ನು ಕಂಡು ಆಕ್ರೋಶಗೊಂಡ ಶಿವರಾಜ ಜಗಳ ತೆಗೆದು ಅಜ್ಜಿಯ ಕತ್ತಿಗೆ ಮರದ ರಿಫೀಸ್‌ನಿಂದ ಬಲವಾಗಿ ಹೊಡೆದಿದ್ದಾನೆ.ಗಾಯಗೊಂಡಿದ್ದ ಲಕ್ಷ್ಮಮ್ಮ ಅವರಿಗೆ ಮನೆಯವರು ರಕ್ತ ಒರೆಸಿ ಔಷಧಿ ಹಾಕಿ ಮಲಗಿಸಿದ್ದು ಕೆಲ ಹೊತ್ತಿನಲ್ಲಿ ಅವರು ಮಲಗಿದ್ದ ಜಾಗದಲ್ಲೇ ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿದ ಬನಶಂಕರಿ ಪೊಲೀಸರು ಕೃತ್ಯವೆಸಗಿ ಪರಾರಿಯಾಗಿರುವ ಶಿವರಾಜ್‌ಗಾಗಿ ತೀವ್ರ ಶೋಧ ನಡೆಸಿದ್ದಾರೆ ಎಂದು ಡಿಸಿಪಿ ಲೋಕೇಶ್‌ಕುಮಾರ್ ತಿಳಿಸಿದ್ದಾರೆ.
ಮಹಿಳೆಗೆ ಪ್ರಾಣ ಬೆದರಿಕೆ
ಬೆಂಗಳೂರು,ಏ.೨೬-ನಿವೇಶನ ನೀಡುವುದಾಗಿ ವಂಚಿಸಿರುವ ವ್ಯಕ್ತಿಯೊಬ್ಬರು ಮಹಿಳೆಯೊಬ್ಬರನ್ನು ಅವಾಚ್ಯಶಬ್ದಗಿಳಿಂದ ನಿಂದಿನಿ ಪ್ರಾಣ ಬೆದರಿಕೆ ಹಾಕಿರುವ ಪ್ರಕರಣ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ನಿವೇಶನ ನೀಡುವುದಾಗಿ ವಿದ್ಯಾರಣ್ಯಪುರದ ಪೆದ್ದ ಮಂಜುನಾಥ್ ಅವರು ಎರಡು ವರ್ಷಗಳ ಹಿಂದೆ ವಿದ್ಯಾರಣ್ಯಪುರದ ನಂಜಪ್ಪ ಬಡಾವಣೆಯ ಮೈಥಿಲಿ ಬಾಲ ಅವರಿಂದ ೧ಲಕ್ಷ ೩೫ ಸಾವಿರ ಹಣ ಪಡೆದಿದ್ದು ಇಲ್ಲಿಯವರೆಗೆ ನಿವೇಶನ ನೀಡಿರುವುದಿಲ್ಲ. ನಿವೇಶನ ನೀಡದಿದ್ದರೂ ಕೊಟ್ಟ ಹಣವಾದರೂ ವಾಪಸ್ಸು ಕೊಡುವಂತೆ ಮೈಥಿಲಿ ಬಾಲ ಅವರು ಹಲವು ಬಾರಿ ಕೇಳಿದ್ದರೂ ಹಣ ಹಿಂತಿರುಗಿಸದೇ ಬೆದರಿಸುತ್ತಿದ್ದರಿಂದ ಬೇಸತ್ತ ಮೈಥಿಲಿ ಅವರು ದೂರು ದಾಖಲಿಸಿದ್ದರು. ನಿವೇಶನದ ವಿಚಾರವಾಗಿ ಕಳೆದ ಏ.೧೩ರಂದು ಮಲ್ಲೇಶ್ವರಂನ ಸಂಪಿಗೆ ರಸ್ತೆಯ ಕಾಫಿ ಡೇ ಬಳಿ ಬರುವಂತೆ ಕರೆದ ಪೆದ್ದ ಮಂಜುನಾಥ್ ಹಾಗೂ ಆತನ ಸ್ನೇಹಿತ ಪೊಲೀಸರುಗೆ ನೀಡಿದ ದೂರನ್ನು ವಾಪಸ್ಸು ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿ ನಿಂದಿಸಿದ್ದಾರೆ ಎಂದು ಮೈಥಿಲಿ ಬಾಲ ಅವರು ದೂರು ನೀಡಿದ್ದು ವಿದ್ಯಾರಣ್ಯಪುರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Write A Comment