ರಾಷ್ಟ್ರೀಯ

ರಿಯೊ ಒಲಿಂಪಿಕ್ಸ್‌ಗೆ ರೋವರ್‌ ದತ್ತು ಅರ್ಹತೆ

Pinterest LinkedIn Tumblr

Rower-Dattuನವದೆಹಲಿ (ಪಿಟಿಐ): ಭಾರತದ ರೋವರ್ ದತ್ತು ಬಬನ್‌ ಭೊಕನಾಲ್ ಅವರು ಸೋಮವಾರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾರೆ.

ದಕ್ಷಿಣ ಕೊರಿಯಾದ ಚುಂಗ್‌ ಜುವಿನಲ್ಲಿ ನಡೆದ ಎಫ್‌ಐಎಸ್‌ಎ ಏಷ್ಯನ್‌ ಹಾಗೂ ಒಸಿಯಾನಿಯ ಒಲಿಂಪಿಕ್‌ ಅರ್ಹತಾ ಟೂರ್ನಿಯ ಪುರುಷರ ವೈಯಕ್ತಿಕ ಸ್ಕಲ್ಸ್‌ ವಿಭಾಗದಲ್ಲಿ ಬೆಳ್ಳಿ ಸಾಧನೆಯ ಮೂಲಕ ಅವರು ಈ ಸಾಧನೆ ಮಾಡಿದರು.

25 ವರ್ಷದ ಸೇನಾಯೋಧ ದತ್ತು, 2 ಕಿಲೋ ಮೀಟರ್ ದೂರವನ್ನು 7ನಿಮಿಷ 07.63 ಸೆಕೆಂಡ್‌ಗಳಲ್ಲಿ ಕ್ರಮಿಸಿ ಎರಡನೇಯವರಾಗಿ ಗುರಿ ಮುಟ್ಟಿದರು.

ಈ ಟೂರ್ನಿಯ ಫೈನಲ್‌ ಸುತ್ತಿನಲ್ಲಿ ಅಗ್ರ ಏಳು ಸ್ಥಾನಗಳನ್ನು ಪಡೆಯುವ ಸ್ಪರ್ಧಿಗಳು ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತಾರೆ.

ನಾಸಿಕ್‌ ಮೂಲಕ ದತ್ತು, 1,500 ಮೀಟರ್‌ ವರೆಗೂ ಐವರು ಸ್ಪರ್ಧಿಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಆದರೆ, ಕೊನೆಯ ಕ್ಷಣಗಳಲ್ಲಿ ಚುರುಕಿನ ಚಲನೆ ತೋರಿದ ಕೊರಿಯಾದ ದೊಂಗ್ಯಾಂಗ್ ಕಿಮ್‌(7 ನಿಮಿಷ, 05.13 ಸೆಕೆಂಡ್) ಮೊದಲಿಗರಾಗಿ ಗುರಿ ಮುಟ್ಟಿ ಚಿನ್ನಕ್ಕೆ ಕೊರಳೊಡ್ಡಿದರು.

‘ದತ್ತು ಅವರು ರಿಯೊಗೆ ಅರ್ಹತೆ ಪಡೆದಿರುವ ಸಂಗತಿ ಖುಷಿ ತಂದಿದೆ’ ಎಂದು ಭಾರತ ರೋಯಿಂಗ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಗಿರೀಶ್‌ ಜೆ. ಫಡ್ನೀಸ್ ತಿಳಿಸಿದ್ದಾರೆ.

Write A Comment