ಕರ್ನಾಟಕ

ವಿಜಯ ಭಾಸ್ಕರ್ ಎತ್ತಂಗಡಿಗೆ ಸಿದ್ದು ಕೈವಾಡ

Pinterest LinkedIn Tumblr

Jagadish-shettar1ಬೆಂಗಳೂರು, ಏ. ೨೫- ಬಿಡಿಎನಲ್ಲಿ ನಡೆದಿರುವ ಬಹು ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಿದ ಕಾರಣಕ್ಕಾಗಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಂ. ವಿಜಯ್ ಭಾಸ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಈ ವರ್ಗಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇರ ಕೈವಾಡವಿದೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದರು.
ಬಿಡಿಎನಲ್ಲಿ ಬದಲಿ ನಿವೇಶನಗಳ ದೊಡ್ಡ ಹಗರಣವೇ ನಡೆದಿದೆ. ಇದನ್ನು ಕಳೆದ ವಾರ ತಾವು ಬಹಿರಂಗಗೊಳಿಸಿದ ತಕ್ಷಣವೇ ನರಗಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಎಂ. ವಿಜಯ್ ಭಾಸ್ಕರ್ ಬಿಡಿಎ ಆಯುಕ್ತರಿಗೆ ಪತ್ರ ಬರೆದು ಬದಲಿ ನಿವೇಶನ ಹಂಚಿಕೆಯನ್ನು ರದ್ದುಗೊಳಿಸುವಂತೆ ಹಾಗೂ ಈ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಶಶಿಧರ್ ನೀಡಿದ್ದ ವರದಿಯನ್ನು ಅನುಷ್ಠಾನಗೊಳಿಸುವಂತೆ ಸೂಚಿಸಿ, ತಪ್ಪೆಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ತಾಕೀತು ಮಾಡಿದ್ದರು.
ಈ ಬದಲಿ ನಿವೇಶನ ಹಗರಣದಲ್ಲಿ ಬಿಡಿಎ ಆಯುಕ್ತ ಶ್ಯಾಂ ಭಟ್‌ ರವರೇ ಭಾಗಿಯಾಗಿದ್ದು, ಅವರ ರಕ್ಷಣೆ ಮಾಡುವ ಸಲುವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಂ. ವಿಜಯ್ ಭಾಸ್ಕರ್ ಅವರನ್ನು ನಗರಾಭಿವೃದ್ಧಿ ಇಲಾಖೆಯಿಂದ ಎತ್ತಂಗಡಿ ಮಾಡಿದರು ಎಂದು ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ದೂರಿದರು.
ಮುಖ್ಯಮಂತ್ರಿ ಸ್ನೇಹಿತನ ಪುತ್ರ ಭಾಗಿಯಾಗಿರುವ ಶಾಂತ ಇಂಡಸ್ಟ್ರೀಸ್‌ನ ಭೂ ಅವ್ಯವಹಾರದ ಬಗ್ಗೆಯೂ ತಂದಿರುವ ದೂರಿನ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಹ ವಿಜಯ್ ಭಾಸ್ಕರ್ ಬಿಡಿಎ ಆಯುಕ್ತರಿಗೆ ಪ್ರತ್ಯೇಕ ಪತ್ರ ಬರೆದಿದ್ದರು. ಇದರಿಂದ ಸಿಟ್ಟಿಗೆಟ್ಟ ಮುಖ್ಯಮಂತ್ರಿಗಳು ಪತ್ರ ಬರೆದ ಮರುದಿನವೇ ಭ್ರಷ್ಟರ ರಕ್ಷಣೆ ಮಾಡುವ ಏಕೈಕ ಕಾರಣದಿಂದ
ಬದಲಿ ನಿವೇಶನ ಹಂಚಿಕೆ ವಿಚಾರವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

Write A Comment