ಕರ್ನಾಟಕ

ಸೈಬರ್ ದಾಳಿಯಲ್ಲಿ ಭಾರತಕ್ಕೆ 6ನೇಸ್ಥಾನ

Pinterest LinkedIn Tumblr

Cyber Attack Crime

ಬೆಂಗಳೂರು: ಕಳೆದ ವರ್ಷ ಏಷ್ಯಾದಲ್ಲಿ ನಡೆದ ಸೈಬರ್ ದಾಳಿಗಳ ಪೈಕಿ ಭಾರತ ಆರನೇ ಸ್ಥಾನದಲ್ಲಿದೆ.

ಸೈಬರ್ ದಾಳಿಗಳ ಪೈಕಿ ಭಾರತವೂ ೨೦೧೩ರಲ್ಲಿ ೭ ಹಾಗೂ ೨೦೧೪ರಲ್ಲಿ ೫ ಸ್ಥಾನದಲ್ಲಿದ್ದು ಕಳೆದ ವರ್ಷ ೬ನೇ ಸ್ಥಾಣಕ್ಕೆ ಇಳಿದಿದ್ದರೂ ಆತಂಕ ಮಾತ್ರ ಕಡಿಮೆಯಾಗಿಲ್ಲ ಕೆಲವು ಸಂಸ್ಥೆಗಳು ನಿರಂತರ ದಾಳಿಗೊಳಗಾಗಿರುವ ಉದಾಹರಣೆಗಳಿದ್ದು ಆತಂ ಮತ್ತಷ್ಟು ಹೆಚ್ಚಾಗಿದೆ.

ಸಾರ್ವಜನಿಕ ಸೇವಾ, ಆರ್ಥಿಕ ಸಂಸ್ಥೆಗಳು ಅತಿ ಹೆಚ್ಚು ಬಾರಿ ಸೈಬರ್ ದಾಳಿಗಳಿಗೆ ಒಳಗಾಗುತ್ತಿವೆ. ವರ್ಷಕ್ಕೆ ಒಂದೆರಡು ಬಾರಿ ಈ ಸಂಸ್ಥೆಗಳ ಮೇಲೆ ಸೈಬರ್ ಅಪರಾಧಿಗಳು ಕೈ ಹಾಕಿರುತ್ತಾರೆ. ಇತ್ತೀಚೆಗೆ ಗಣಿ ಸಂಸ್ಥೆಗಳು ಸೈಬರ್ ಅಪರಾಧಿಗಳ ಕೆಂಗಣ್ಣಿಗೆ ಗುರಿಯಾಗಿವೆ.

ಬಿಎಫ್‌ಎಸ್‌ಐನ ಸಂಸ್ಥೆಗಳು ವರ್ಷಕ್ಕೊಮ್ಮೆಯಾದರೂ ದಾಳಿಗೀಡಾಗಿವೆ. ಸೀಮೆಂಟೆಕ್ ನಡೆಸಿದ ಸಮೀಕ್ಷೆಯ ಪ್ರಕಾರ ಆರ್ಥಿಕ ವ್ಯವಹಾರಗಳ ಹ್ಯಾಕ್ ವಿಷಯದಲ್ಲಿ ಭಾರತ ಈಗ ಮೂರನೇ ಸ್ಥಾನದಲ್ಲಿದೆ.

ಭಾರತದಲ್ಲಿ ಅತ್ಯಧಿಕವಾಗಿರುವ ಯುವ ಸಮೂಹ ಮೊಬೈಲ್ ಸಂಪರ್ಕ, ಕ್ಲೌಡ್ ತಂತ್ರಜ್ಞಾನ ಅತ್ಯಧಿಕ ಬಳಕೆ ಹಾಗೂ ಮೂಲಸೌಕರ್ಯದಲ್ಲಿ ಐಸಿಟಿ ಬಳಕೆ ಹೆಚ್ಚಾಗಿದೆ.

ಇದರಿಂದಾಗಿ ಸೈಬರ್ ಅಪರಾಧಿಗಳ ಪಾಲಿಗೆ ಭಾರತ ಸುಲಭ ತುತ್ತಾಗಿದೆ. ಸ್ಪ್ಯಾಮ್ ಕ್ಯಾಪಿಟಲ್ ಎಂದೇ ಹೆಸರಾಗಿದ್ದ ಭಾರತದಲ್ಲೀಗ ಈ ಸ್ಪಾಪ್ ಉತ್ಪಾದನೆ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

ಸ್ಪ್ಯಾಮ್‌ಗಳ ಮೂಲ ಕೇಂದ್ರದ ವಿಷಯದಲ್ಲಿ ೨೦೧೪ರಲ್ಲಿ ೬ನೇ ಸ್ಥಾನದಲ್ಲಿದ್ದ ಭಾರತ ಈಗ ೧೮ನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಸ್ಪ್ಯಾಮ್, ಮಾಲ್‌ವೇರ್, ಫಿಷಿಂಗ್ ಹೋಸ್ಟ್ಸ್, ಬೊಟ್ಸ್‌ಗಳಿಗೆ ಭಾರತ ಮೂಲ ಕೇಂದ್ರವಾಗಿದೆ. ಒಟ್ಟಾರೆ ಜಾಗತಿಕ ಮಟ್ಟದಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

ಸೈಬರ್ ದಾಳಿಗಳ ಹಿನ್ನೆಲೆಯಲ್ಲಿ ನಾವು ಕಲಿಯಬೇಕಾದ್ದು ಸಾಕಷ್ಟಿದೆ. ಸಮಗ್ರ ದೃಷ್ಟಿಕೋನದಿಂದ ನೋಡುವುದಾದರೆ ೨೦೧೫ರಲ್ಲಿ ಯಾವ್ಯಾವ ಮಟ್ಟದಲ್ಲಿ ಸೈಬರ್ ಅಪರಾಧಿಗಳು ಲಗ್ಗೆ ಇಟ್ಟಿದ್ದಾರೆ ಎನ್ನುವುದು ತಿಳಿಯಲಿದೆ.

ಶೇಕಡ ೩೦ರಷ್ಟು ಬೃಹತ್ ಸಂಸ್ಥೆಗಳು ಸೈಬರ್ ಅಪರಾಧಿಗಳ ದಾಳಿಗೆ ತುತ್ತಾಗಿವೆ. (೨೦೧೪ರಲ್ಲಿ ಶೇಕಡ ೬೦ ಇತ್ತು) ಸಣ್ಣಪುಟ್ಟ ಸಂಸ್ಥೆಗಳ ಬದಲಿಗೆ ದೊಡ್ಡ ದೊಡ್ಡ ಕಂಪನಿಗಳ ಮೇಲೆ ದಾಳಿ ನಡೆಸುವುದು ಆರು ಪಟ್ಟು ಹೆಚ್ಚಾಗಿರುವುದು ಸೀಮೆಂಟೆಕ್ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿದೆ.

Write A Comment