ಕರ್ನಾಟಕ

ಡಾ. ರಾಜ್‌ಗೆ ಭಾರತರತ್ನ ಮೇಯರ್ ಆಗ್ರಹ

Pinterest LinkedIn Tumblr

dr.raj

ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಅವರಿಗೆ `ಭಾರತ ರತ್ನ’ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಬೇಕೆಂದು ಕೇಂದ್ರ ಸರ್ಕಾರವನ್ನು ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿಯವರು ಆಗ್ರಹ ಪಡಿಸಿದ್ದಾರೆ.

ನಗರದ ಸೌತ್ ಎಂಡ್ ವೃತ್ತದಲ್ಲಿರುವ ಡಾ. ರಾಜ್ ಕುಮಾರ್ ಅವರ 14.5 ಅಡಿ ಎತ್ತರದ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಡಾ. ರಾಜ್ ಕುಮಾರ್ ಅವರಿಗೆ ಈಗಾಗಲೇ ಭಾರತ ರತ್ನ ಪ್ರಶಸ್ತಿ ಸಲ್ಲಬೇಕಿತ್ತು. ಹಾಗಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಬೇಕೆಂದು ಪಾಲಿಕೆ ವತಿಯಿಂದ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.

ಪಾಲಿಕೆ ವತಿಯಿಂದಲೇ ಡಾ. ರಾಜ್ ಕುಮಾರ್ ಅವರ ಪ್ರತಿಮೆಯನ್ನು ನಿರ್ಮಿಸಬೇಕೆಂದು 2006 ರಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. 2013 ರಲ್ಲಿ ಈ ಪ್ರತಿಮೆಯನ್ನು ಪಾಲಿಕೆ ವತಿಯಿಂದಲೇ ಪ್ರತಿಷ್ಠಾಪಿಸಲಾಯಿತು ಎಂದರು.

ನಂತರ ಮೇಯರ್ ಅವರು ತಾವೇ ಖುದ್ದು ಎಲ್ಲರಿಗೂ ಸಿಹಿ ಹಂಚಿದರು. ಈ ಸಂದರ್ಭದಲ್ಲಿ ಯಡಿಯೂರು ವಾರ್ಡ್ ಸದಸ್ಯೆ ಪೂರ್ಣಿಮಾ ರಮೇಶ್, ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್. ರಮೇಶ್, ಜಂಟಿ ಆಯುಕ್ತ ಹೇಮಚಂದ್ರ, ಮುಖ್ಯ ಇಂಜಿನಿಯರ್ ಬೆಟ್ಟೇಗೌಡ, ಮತ್ತಿತರರು ಉಪಸ್ಥಿತರಿದ್ದರು.

Write A Comment