ಕರ್ನಾಟಕ

ಡಿಕೆಶಿ ಬಚಾವ್ ಬಿಎಸ್‌ವೈಗೆ ಗುನ್ನ: ಡಿನೋಟಿಫಿಕೇಷನ್ ಮೇಲ್ಮನವಿ

Pinterest LinkedIn Tumblr

DK-Shivakumar1ಬೆಂಗಳೂರು, ಏ. ೨೩- ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕಾಲದಲ್ಲಿ ನ‌‌ಡೆದ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಈಗಿನ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ರವರು ಭಾಗಿಯಾಗಿರುವ ಪ್ರಕರಣದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸುವ ಬಗ್ಗೆ ಪರಿಶೀಲನೆ ನಡೆಸಿ ತೀರ್ಮಾನ ಕೈಗೊಳ್ಳುವುದಾಗಿ ಕಾನೂನು ಹಾಗೂ ಉನ್ನತ ಶಿಕ್ಷಣ ಸಚಿವ ಟಿ.ಬಿ. ಜಯಚಂದ್ರ ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಡಿ ನೋಟಿಫಿಕೇಷನ್ ಪ್ರಕರಣದ ಮೇಲ್ಮನವಿ ಸಂದರ್ಭದಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ರವರು ಭಾಗಿಯಾಗಿರುವ ಪ್ರಕರಣವನ್ನು ಕೈಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ತಮಗೆ ಮಾಹಿತಿ ಇಲ್ಲ. ಮೇಲ್ಮನವಿ ಸಲ್ಲಿಸುವುದು ಗೃಹ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಎಲ್ಲವನ್ನು ಪರಿಶೀಲಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.
ಸಚಿವ ಡಿ.ಕೆ. ಶಿವಕುಮಾರ್ ಭಾಗಿಯಾಗಿರುವ ಪ್ರಕರಣದಲ್ಲಿ ನೀಡಿರುವ ತೀರ್ಪು, ಮೇಲ್ಮನವಿಗೆ ಅವಕಾಶ ಇದೆಯೇ ಎಲ್ಲದರ ಬಗ್ಗೆಯೂ ಕೂಲಂಕುಷವಾಗಿ ಪರಿಶೀಲಿಸಲಾಗುವುದು ಎಂದರು.
ಕಾನೂನಿನ ಪ್ರಕಾರ ಅವಕಾಶ ಇದ್ದರೆ ಡಿ.ಕೆ.ಶಿ. ಭಾಗಿಯಾಗಿರುವ ಡಿ ನೋಟಿಫಿಕೇಷನ್ ಪ್ರಕರಣದ ಬಗ್ಗೆಯೂ ಮೇಲ್ಮನವಿ ಸಲ್ಲಿಸಲಾಗುವುದೆ ಎಂಬ ಪ್ರಶ್ನೆಗೆ ಅವರು ಸ್ಪಷ್ಟ ಉತ್ತರ ನೀಡದೆ ಎಲ್ಲವನ್ನೂ ಪರಿಶೀಲಿಸಿದ ನಂತರವೇ ಒಂದು ತೀರ್ಮಾನಕ್ಕೆ ಬರುವುದಾಗಿ ಹೇಳಿದರು.

Write A Comment