ಕರ್ನಾಟಕ

ನಗರದಲ್ಲಿ 18ಕೆಜಿ ಗಾಂಜಾ ವಶ

Pinterest LinkedIn Tumblr

crime-1-3ಬೆಂಗಳೂರು, ಏ. ೨೩- ಕಲಾಸಿಪಾಳ್ಯದ ಬಸ್‌ನಿಲ್ದಾಣದ ಬಳಿ ಗಾಂಜಾ ಚೀಲದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೪ ಮೊಬೈಲ್‌ಗಳು ಸೇರಿದಂತೆ ೨ ಲಕ್ಷ ಮೌಲ್ಯದ ೧೮ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕೊಳ್ಳೆಗಾಲದ ಮಂಚಾಪುರದ ನಾರಾಯಣ (೩೨), ಗುರುದೇವ (೪೮), ಆನಂದ (೨೬) ಹಾಗೂ ವಿಶ್ವನಾಥ (೧೯) ಬಂಧಿತ ಆರೋಪಿಗಳು.
ಕಲಾಸಿಪಾಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಕಾರ್ಯಾ ಚರಣೆ ನಡೆಸಿದ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಗುಡಿಬಂಡೆ ಬಳಿ ಅಪಘಾತ ಇಬ್ಬರ ಸಾವು
ಬೆಂಗಳೂರು,ಏ.೨೩-ವೇಗವಾಗಿ ಹಿಂದಿನಿಂದ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುWಟನೆ ಚಿಕ್ಕಬಳ್ಳಾಪುರದ ಚೆಂಡೂರು ಕ್ರಾಸ್ ಬಳಿ ನಡೆದಿದೆ.
ಚಿಕ್ಕಬಳ್ಳಾಪುರದ ರಾಷ್ಟ್ರೀಯ ಹೆದ್ದಾರಿ ೭ರ ಚೆಂಡೂರು ಕ್ರಾಸ್ ಬಳಿ ನಿನ್ನೆ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಮೃತರನ್ನು ಆಂಧ್ರ ಪ್ರದೇಶದ ತಾಡಪತ್ರಿಯ ಜಾಕಿರ್ ಹುಸೇನ್ (೩೫) ಮತ್ತು ಉಯ್ಯಾಲವಾಡ ಗ್ರಾಮದ ನರಸಿಂಹರೆಡ್ಡಿ (೩೨) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಅವಘಡ ಸಂಭವಿಸಿದೆ. ಡಿಕ್ಕಿ ಹೊಡೆದ ವಾಹನ ಚಾಲಕ ವಾಹನದೊಂದಿಗೆ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಗುಡಿಬಂಡೆ ಪೊಲೀಸರು
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅಕ್ರಮ ಜೂಜು
ಬೆಂಗಳೂರು, ಏ. ೨೩-ರಾಜರಾಜೇಶ್ವರಿ ನಗರದ ಪಟ್ಟಣಗೆರೆ ರೆಮ್ಕೋ ಲೇಔಟ್‌ನ ಅಪಾರ್ಟ್‌ಮೆಂಟ್‌ನ ವಾಸದ ಮನೆಯೊಂದರಲ್ಲಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದ ೧೨ ಮಂದಿಯನ್ನು ಬಂಧಿಸಿರುವ ಸಿಸಿಬಿ ಪೊಲೀಸರು ೩ಲಕ್ಷ ೭೮ ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮನೆಯ ಮಾಲೀಕನಾಗಿದ್ದ ದವರಾಜ ಹೊರಗಡೆಯಿಂದ ಇಸ್ಪೀಟ್ ಆಡುವ ಪಂಟರ್‌ಗಳನ್ನು ಕರೆಯಿಸಿ ತಲಾ ೫೦೦ ರೂ.ಗಳನ್ನು ಎಂಟ್ರಿ ಹಣವನ್ನಾಗಿ ಪಡೆದುಕೊಂಡು ಅಂದರ್ -ಬಾಹರ್ ಎಂಬ ಜೂಜಾಟವಾಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment