ಕರ್ನಾಟಕ

ಆದಾಯ ಮೀರಿದ ಆಸ್ತಿ; ಸಚಿವ ಚಿಂಚನಸೂರ್ ವಿರುದ್ಧ ತನಿಖೆಗೆ ಲೋಕಾ ಆದೇಶ

Pinterest LinkedIn Tumblr

sc-st-1ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಜವಳಿ ಸಚಿವ ಬಾಬೂರಾವ್ ಚಿಂಚನಸೂರ್ ವಿರುದ್ಧ ಲೋಕಾಯುಕ್ತ ವಿಶೇಷ ಕೋರ್ಟ್ ಶುಕ್ರವಾರ ತನಿಖೆಗೆ ಆದೇಶ ನೀಡಿದೆ.

ಸಚಿವ ಬಾಬೂರಾವ್ ಚಿಂಚನಸೂರ್ ಅವರು ಅಪಾರ ಪ್ರಮಾಣದಲ್ಲಿ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಿ ಶಾಂತಪ್ಪ ಎಂಬವರು ಖಾಸಗಿ ದೂರನ್ನು ದಾಖಲಿಸಿದ್ದರು.

ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ 2012ರಲ್ಲಿಯೂ ಲೋಕಾಯುಕ್ತ ಕೋರ್ಟ್ ಚಿಂಚನಸೂರ್ ವಿರುದ್ಧ ತನಿಖೆಗೆ ಆದೇಶಿಸಿತ್ತು. ಆದರೆ ಆಗಿನ ಲೋಕಾಯುಕ್ತ ಕೋರ್ಟ್ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು.
-ಉದಯವಾಣಿ

Write A Comment