ಕರ್ನಾಟಕ

ಮಂಜು v/s ಮಾಲಾಶ್ರೀ; ಸ್ಟುಪಿಡ್ ಹೇಳಿಕೆ ಮಂಜು ಆಕ್ರೋಶ

Pinterest LinkedIn Tumblr

K-Manjuಬೆಂಗಳೂರು: ಹೆಣ್ಮಕ್ಕಳು ಕಣ್ಣೀರು ಹಾಕಿದರೆ ಎಲ್ಲರೂ ನಂಬಿ ಬಿಡುತ್ತಾರೆ. ಆದರೆ ನಿರ್ಮಾಪಕರ ಕಷ್ಟ ಯಾರಿಗೂ ಅರ್ಥವಾಗೋದಿಲ್ಲ. ಕಣ್ಣೀರು ಹಾಕಿಬಿಟ್ಟರೆ ರಾಜ್ಯದ ಜನ ನಂಬಿ ಬಿಡುತ್ತಾರಾ?…ಇದು ನಟನೆ ಬರಲ್ಲ ಎಂದು ತನಗೆ ಅಪಮಾನ ಮಾಡಿದ್ದಾರೆಂದು ಕಣ್ಣೀರು ಹಾಕಿದ್ದ ನಟಿ ಮಾಲಾಶ್ರೀಗೆ ನಿರ್ಮಾಪಕ ಕೆ. ಮಂಜು ನೀಡಿದ ತಿರುಗೇಟು.

ನಟನೆ ಬರುವುದಿಲ್ಲ ಎಂಬ ನೆಪವೊಡ್ಡಿ ತಮ್ಮನ್ನು ಉಪ್ಪು ಹುಳಿ ಖಾರ ಸಿನಿಮಾದಿಂದ ತೆಗೆದುಹಾಕಿರುವುದಲ್ಲದೆ, 25 ವರ್ಷಗಳ ವೃತ್ತಿ ಬದುಕಿಗೆ ಅವಮಾನ ಮಾಡಿದ್ದಾರೆ ಎಂದು ನಟಿ ಮಾಲಾಶ್ರೀ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರು ಹಾಕಿದ್ದರು.

ಶುಕ್ರವಾರ ಮಾಲಾಶ್ರೀ ಆರೋಪಕ್ಕೆ ಕೆ.ಮಂಜು ಹಾಗೂ ಇಮ್ರಾನ್ ಸರ್ದಾರಿಯಾ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನೇನ್ ಮಾಲಾಶ್ರೀ ಮನೆಯ ಕೆಲಸದವನಾ? ನನ್ನ ಸ್ಟುಪಿಡ್ ಅಂತ ಕರೆದಿದ್ದು ಯಾಕೆ ಎಂದು ಮಂಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನೇನು ನಿಮ್ಮ ಆಸ್ತಿ, ಮನೆ ಕೇಳಿದ್ದೇನಾ? ಇದು ನಾಲ್ಕು ವರ್ಷದ ಹಿಂದಿನ ಸಿನಿಮಾ. ಆಗಲೇ ನಾನು ಸಿಂಗಲ್ ಪೇಮೆಂಟ್ ನಲ್ಲಿ ಮಾಲಾಶ್ರೀಗೆ 45 ಲಕ್ಷ ರೂ. ಹಣ ಕೊಟ್ಟಿದ್ದೆ. ಮಾಲಾಶ್ರೀ ನನ್ನ ಆತ್ಮೀಯ ಗೆಳೆಯ ರಾಮುವಿನ ಪತ್ನಿ. ಗೆಳೆಯನ ಪತ್ನಿ ಬಗ್ಗೆ ನನಗೆ ಗೌರವವಿದೆ. ಅದನ್ನು ಮಾಲಾಶ್ರೀ ಉಳಿಸಿಕೊಳ್ಳಬೇಕು. ಕಷ್ಟದಲ್ಲಿದ್ದಾರೆ ಅಂತ ನಾನು ಹಣದ ಸಹಾಯ ಮಾಡಿದ್ದೆ. ಅದಕ್ಕೆ ಮಾಲಾಶ್ರೀ ನನಗೆ ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ ಎಂದು ಮಂಜು ವ್ಯಂಗ್ಯವಾಡಿದರು.

ಸಿನಿಮಾ ಶೂಟಿಂಗ್ ನಲ್ಲಿ ಮಾಲಾಶ್ರೀ ಅವರ ನಟನೆ ಚೆನ್ನಾಗಿಲ್ಲ ಎಂದು ಹೇಳಿಲ್ಲ. ನಿರೀಕ್ಷಿತ ಮಟ್ಟದಲ್ಲಿ ನಟನೆ ಬಂದಿಲ್ಲ ಎಂದು ಹೇಳಿದ್ದೆ ಅಷ್ಟೇ ಎಂದು ಇಮ್ರಾನ್ ಸರ್ದಾರಿಯಾ ಸ್ಪಷ್ಟನೆ ನೀಡಿದರು. ಚಿತ್ರದಲ್ಲಿ ನಟಿಸಲು ಹಣ ಪಡೆದ ಮೇಲೂ ಶೂಟಿಂಗ್ ಗೆ ಸರಿಯಾದ ಸಮಯಕ್ಕೆ ಬರುತ್ತಿರಲಿಲ್ಲ. ಮಹೂರ್ತಕ್ಕೆ ಕರೆಯುವಾಗ ತಕರಾರು. ಹೀಗೆ ಎಲ್ಲದಕ್ಕೂ ತಕರಾರು ಮಾಡುತ್ತಿದ್ದರು ಎಂದು ದೂರಿದರು.
-ಉದಯವಾಣಿ

Write A Comment