ಕರ್ನಾಟಕ

ಕೋರ್ಟ್‌ಗೆ ಸುದೀಪ್‌ ದಂಪತಿ ಗೈರು : ವಿಚ್ಛೇಧನ ವಿಚಾರಣೆ ಜೂನ್‌ 29ಕ್ಕೆ

Pinterest LinkedIn Tumblr

2_0ಬೆಂಗಳೂರು : ವಿಚ್ಛೇಧನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ನಟ ಸುದೀಪ್‌ ಮತ್ತು ಪತ್ನಿ ಪ್ರಿಯಾ ಅವರು ಶುಕ್ರವಾರ ವಿಚಾರಣೆಗೆ ಗೈರಾಗಿದ್ದಾರೆ.

ಸುದೀಪ್‌ ಅವರ ಪರವಾಗಿ ಅಕ್ಕ ಸುಜಾತ ಕೋರ್ಟ್‌ಗೆ ಹಾಜರಾಗಿ ಸುದೀಪ್‌ ಅವರು ಹಾಜರಾಗಲು ಕಾಲಾವಕಾಶ ಕೋರಿದರು .ಈ ಹಿನ್ನಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ವಿಚಾರಣೆಯನ್ನು ಜೂನ್‌ 29ಕ್ಕೆ ಮುಂದೂಡಿದೆ.

2001ರಲ್ಲಿ ಸುದೀಪ್ ಕೇರಳ ಮೂಲದ ನಾಯರ್ ಕುಟುಂಬದ ಪ್ರಿಯಾ ರಾಧಕೃಷ್ಣನ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ವೈಯಕ್ತಿಕ ಕಾರಣಗಳಿಂದ ಸುದೀಪ್ ಮತ್ತು ಪ್ರಿಯಾ ಬೇರೆಯಾಗಲು ನಿರ್ಧರಿಸಿದ್ದಾರೆ. ಇಬ್ಬರಿಗೂ 11 ವರ್ಷದ ಪುತ್ರಿ ಇದ್ದು, ಆಕೆಯನ್ನು ಪತ್ನಿ ಪ್ರಿಯ ಸುಪರ್ದಿಗೆ ನೀಡಲು ಸುದೀಪ್ ಸಮ್ಮತಿಸಿದ್ದಾರೆ. ಅಲ್ಲದೇ ಪತ್ನಿ ಪ್ರಿಯಾ ಮತ್ತು ಪುತ್ರಿ ಸಾನ್ವಿ ಇಬ್ಬರ ಜೀವನಾಂಶಕ್ಕೆ 19 ಕೋಟಿ ನೀಡಲು ಕಿಚ್ಚ ಒಪ್ಪಿದ್ದರೆನ್ನಲಾಗಿದೆ.
-ಉದಯವಾಣಿ

Write A Comment