ಕರ್ನಾಟಕ

ನಾಯಕತ್ವಕ್ಕೂ ಜೈ ದಲಿತ ಸಿಎಂಗೂ ಜೈ:ದಲಿತ ಸಿಎಂಗೆ ಸಿದ್ದು ಬೆಂಬಲ

Pinterest LinkedIn Tumblr

siddaramaiahclr-1-297x400ಮೈಸೂರು, ಏ. ೨೨- ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕೆಂಬ ಕೂಗಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ದಲಿತರು ಮುಖ್ಯಮಂತ್ರಿಯಾಗಲು ನನ್ನ ವಿರೋಧವೂ ಇಲ್ಲ. ಅಭ್ಯಂತರವೂ ಇಲ್ಲ. ದಲಿತ ಮುಖ್ಯಮಂತ್ರಿಯಾದರೆ ಯಾರು ಬೇಡ ಅಂತಾರೆ? ನಾನೂ ಕೂಡ ದಲಿತ ಮುಖ್ಯಮಂತ್ರಿಯಾಗಲಿ ಎಂಬ ಒತ್ತಾಯಕ್ಕೆ ಧ್ವನಿಗೂಡಿಸುವೆ ಎಂದು ಹೇಳಿದರು.
ಇಂದು ಇಲ್ಲಿಗೆ ಆಗಮಿಸಿದಾಗ ಇಲ್ಲಿನ ವಿಮಾನ ನಿಲ್ದಾಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ, ನನ್ನ ನಾಯಕತ್ವ ಬದಲಾಗಲಿದೆ ಎಂಬುದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಿಮ್ಮ ಪಕ್ಷದವರೇ ಧ್ವನಿ ಎತ್ತಿದ್ದಾರಲ್ಲ ಎಂದು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಬದಲಾವಣೆ ಕೇವಲ ವದಂತಿ ಎಂದು ಪುನರುಚ್ಚರಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣಗಳನ್ನು ವಜಾಗೊಳಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಂಬಂಧ ರಾಜಕೀಯ ದ್ವೇಷ ಅಡಗಿಲ್ಲ ಎಂದವರು ಹೇಳಿದರು.
ರಾಜ್ಯದಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಈಗಾಗಲೇ 350 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನರ್ ರಚನೆ ವಿಳಂಬವಾಗುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು.

Write A Comment