ಕರ್ನಾಟಕ

ಸೋನಿಯಾ ನಾರಂಗ್, ಜೈಜಗದೀಶ್‌ಗೆ ಕೆಂಪೇಗೌಡ ಗೌರವ

Pinterest LinkedIn Tumblr

Awardಬೆಂಗಳೂರು, ಏ. ೨೧- ಸಿಐಡಿಯ ಡಿಐಜಿ ಸೋನಿಯಾ ನಾರಂಗ್ ಚಿತ್ರ ನಟರಾದ ಜೈಜಗದೀಶ್, ಹೊನ್ನವಳ್ಳಿ ಕೃಷ್ಣ, ರಂಗಭೂಮಿ ಕಲಾವಿದರಾದ ಕಾಕೋಳು ರಾಮಯ್ಯ, ಲತಾ ಹಂಸಲೇಖ, ಸಾಹಿತಿಗಳಾದ ಎಂ.ಎಸ್. ನರಸಿಂಹಮೂರ್ತಿ, ಡಾ. ನರಹಳ್ಳಿ ಬಾಲಸುಬ್ರಮಣ್ಯಂ, ಕ್ರೀಡಾ ಕ್ಷೇತ್ರದ ಸುರೇಶ್ ಪಡುಕೋಣೆ ಸೇರಿದಂತೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ 150 ಗಣ್ಯರಿಗೆ ಬಿಬಿಎಂಪಿ ನಾಡಪ್ರಭು ಕೆಂಪೇಗೌ‌ಡರ ಪ್ರಶಸ್ತಿಯನ್ನು ಪ್ರಕಟಿಸಿದೆ.
ಈ ಗಣ್ಯರಿಗೆ 25 ಸಾವಿರ ರೂ. ನಗದು, ಕೆಂಪೇಗೌಡ ಸ್ಮರಣಿಕೆಯನ್ನು ನಾಳೆ ಸಂಜೆ ಬಿಬಿಎಂಪಿ ಗಾಜಿನ ಮನೆ ಆವರಣದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿಗಳನ್ನು ಪ್ರದಾನ ಮಾಡುವರು ಎಂದು ಪತ್ರಿಕಾಗೋಷ್ಠಿಯಲ್ಲಿ ಮೇಯರ್ ಬಿ.ಎನ್. ಮಂಜುನಾಥರವರು ತಿಳಿಸಿದರು.
ಪ್ರಶಸ್ತಿ ಆಯ್ಕೆ ಮಾಡುವಾಗ ಯಾರಿಂದಲೂ ಒತ್ತಡ ಬಂದಿಲ್ಲ ಎಂದು ಹೇಳಿದರು.
ಸುಮಾರು 15 ಮಂದಿ ಗಣ್ಯರನ್ನು ಸ್ವಯಂ ಪ್ರೇರಿತವಾಗಿ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದ ಅವರು, ಈ ಪಟ್ಟಿ ನಾಳೆ ಸಂಜೆಯೊಳಗೆ ಏರಿಕೆಯಾಗಲಿದೆಯೇ ಎಂಬ ಪ್ರಶ್ನೆಗೆ ಮೇಯರ್ ನಗುವೇ ಉತ್ತರವಾಗಿತ್ತು.
ಉತ್ತಮ ಅಧಿಕಾರಿ ಮತ್ತು ನೌಕರರಿಗೂ ಪ್ರಶಸ್ತಿ
ಬಿಬಿಎಂಪಿ ಸಿಬ್ಬಂದಿ ಮತ್ತು ಆ‌ಡಳಿತಾ ಸುಧಾರಣಾ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಅವರು ಇದೇ ವೇಳೆ ಮಾತನಾಡಿ, ನಿವೃತ್ತಿಯ ಅಂಚಿನಲ್ಲಿರುವ ಹಾಗೂ ತಮ್ಮ ಸೇವೆಯುದ್ದಕ್ಕೂ ಉತ್ತಮ ಸೇವೆ ಸಲ್ಲಿಸಿದ 119 ಅಧಿಕಾರಿ ಮತ್ತು ನೌಕರರನ್ನು ಉತ್ತಮ ನೌಕರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ಪ್ರಕಟಿಸಿದರು.
ನಾಳೆ ಮಧ್ಯಾಹ್ನ 4 ಗಂಟೆಗೆ ಈ ಎಲ್ಲಾ ನೌಕರರಿಗೆ ಮೇಯರ್ ಬಿ.ಎನ್. ಮಂಜುನಾಥ ರೆಡ್ಡಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡುವರು.

Write A Comment