ಕರ್ನಾಟಕ

ಬರ ಪರಿಹಾರಕ್ಕೆ ಬಿಜೆಪಿ ಶಾಸಕ, ಸಂಸದರ ತಿಂಗಳ ವೇತನ ನೀಡುವಂತೆ ಬಿಜೆಪಿ ಶಾಸಕರು, ಸಂಸದರಿಗೆ ಪತ್ರ : ಯಡಿಯೂರಪ್ಪ

Pinterest LinkedIn Tumblr

yaddi

ಬೆಂಗಳೂರು: ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ ಸಂಬಂಧ ತಿಂಗಳ ವೇತನವನ್ನು ಬರಿ ಪರಿಹಾರ ನಿಧಿಗೆ ನೀಡುವಂತೆ ಬಿಜೆಪಿ ಶಾಸಕರು ಹಾಗೂ ಸಂಸದರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ.

ಬಿಜೆಪಿ ಶಾಸಕರು ಹಾಗೂ ಸಂಸದರಿಗೆ ಪತ್ರ ಬರೆದಿರುವ ಯಡಿಯೂರಪ್ಪ ಅವರು, ರಾಜ್ಯಾದಾದ್ಯಂತ ಭೀಕರ ಬರಗಾಲ ಪರಿಸ್ಥಿತಿ ಎದುರಾಗಿದ್ದು, ಜನರ ಸಂಕಷ್ಟಕ್ಕೆ ನೆರವಾಗುವ ಸಲುವಾಗಿ ಒಂದು ತಿಂಗಳ ವೇತನವನ್ನು ಬರಿ ಪರಿಹಾರ ನಿಧಿ ನೀಡುವಂತೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ.

ರಾಜ್ಯದಲ್ಲಿ ಎದುರಾಗಿರುವ ಬರ ಹಿನ್ನೆಲೆಯಲ್ಲಿ ಏ.27 ರಿಂದ ಐದು ದಿನಗಳ ಕಾಲ ಯಡಿಯೂರಪ್ಪ ಅವರು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. ಬೀದರ್ ನಿಂದ ಪ್ರವಾಸ ಆರಂಭಿಸಲಿರುವ ಯಡಿಯೂರಪ್ಪ ಅವರು ನಂತರ ಕಲಬುರಗಿ, ರಾಯಚೂರು, ವಿಜಯಪುರ ಹಾಗೂ ಮುಂತಾದ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

Write A Comment