ಕರ್ನಾಟಕ

ಕಪ್ಪುಚುಕ್ಕೆ ಇಲ್ಲದ ವಿಶ್ವಮಾನವ ಡಾ.ರಾಜ್‌: ಚಿತ್ರನಟ ಮುಖ್ಯಮಂತ್ರಿ ಚಂದ್ರು ಬಣ್ಣನೆ

Pinterest LinkedIn Tumblr

pvec17lkn16Kannada 1ಬೆಂಗಳೂರು: ‘ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಾ. ರಾಜಕುಮಾರ್‌ ಅವರು ಕಪ್ಪುಚುಕ್ಕೆ ಇಲ್ಲದ ವಿಶ್ವಮಾನವ’ ಎಂದು ನಟ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಪಟ್ಟರು.

ಕನ್ನಡ ಜನಶಕ್ತಿ ಕೇಂದ್ರ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್‌ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಶನಿವಾರ ನಡೆದ ‘ಡಾ. ರಾಜಕುಮಾರ್‌ ಸಾಂಸ್ಕೃತಿಕ ಸಮಾವೇಶ–2016’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಡಾ. ರಾಜ್‌ ನಡೆದುಬಂದ ದಾರಿ ಹಾಗೂ ಅವರ ವಿಚಾರಗಳನ್ನು ಆಧಾರವಾಗಿಟ್ಟುಕೊಂಡು ಇಂದಿನ ನಾಡು, ನುಡಿ, ಗಡಿ ವಿಷಯದಲ್ಲಿ ಬದಲಾವಣೆ ತರಲು ಸಾಧ್ಯವೇ? ಎಂಬ ಬಗ್ಗೆ ನಾವು ಚಿಂತನೆ ನಡೆಸಬೇಕಾಗಿದೆ’ ಎಂದರು.

‘ಜನಸಾಮಾನ್ಯರ ಹೃದಯಕ್ಕೆ ಕನ್ನಡವನ್ನು ಕೊಟ್ಟವರು ಡಾ. ರಾಜ್‌. ಅವರ ಚಲನಚಿತ್ರಗಳು ವೀಕ್ಷಿಸಿದರೆ ಕನ್ನಡ ಕಲಿಯಬೇಕು, ಪ್ರೀತಿಸಬೇಕು ಎಂಬ ಹಂಬಲ ಹೆಚ್ಚುತ್ತದೆ. ಅವರು ಇಂದು ಜೀವಂತವಿದ್ದಿದ್ದರೆ ಅನುಷ್ಠಾನಕ್ಕೆ ನಡೆಯುತ್ತಿರುವ ಹೋರಾಟಗಳು ಯಶಸ್ವಿಯಾಗುತ್ತಿದ್ದವು’ ಎಂದು ಚಂದ್ರು ಅವರು ಅಭಿಪ್ರಾಯಪಟ್ಟರು.

ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಕೆ.ಸಿ.ಎನ್‌. ಚಂದ್ರಶೇಖರ್‌ ಮಾತನಾಡಿ, ‘ಕುವೆಂಪು ಪ್ರಕೃತಿಯಲ್ಲಿ ದೇವರು ಕಂಡರೆ, ಡಾ. ರಾಜಕುಮಾರ್ ಅವರು ಅಭಿಮಾನಿ ಗಳಲ್ಲಿ ದೇವರನ್ನು ಕಂಡರು. ಆದರ್ಶಗಳನ್ನು ಜೀವನದಲ್ಲಿ ಅಳವಡಿ ಸಿಕೊಳ್ಳಬೇಕು ಎಂದು ಹೇಳಿದರು.

Write A Comment