ಕರ್ನಾಟಕ

ಕೆಳ ಜಾತಿ ಯುವಕನನ್ನು ಪ್ರೀತಿಸುತ್ತಿದ್ದ ಮಗಳಿಗೆ ವಿಷವುಣಿಸಿ ಕೊಂದ ತಂದೆ, ಅಣ್ಣನ ಬಂಧನ; ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ

Pinterest LinkedIn Tumblr

mysore

ಮೈಸೂರು: ಇತ್ತೀಚೆಗೆ ರಾಜ್ಯದಲ್ಲಿ ಮರ್ಯಾದಾ ಹತ್ಯೆಗಳ ಸರಣಿ ಹೆಚ್ಚುತ್ತಿವೆ. ಮೊನ್ನೆ ಮೊನ್ನೆಯಷ್ಟೇ ಮಂಡ್ಯದಲ್ಲಿ ಮರ್ಯಾದೆಗೆ ಅಂಜಿ ಸ್ವಂತ ಮಗಳನ್ನೇ ಪೋಷಕರು ಹತ್ಯೆ ಮಾಡಿದ್ದ ಘಟನೆ ವರದಿಯಾಗಿತ್ತು.

ಇದೀಗ ಇಂತಹದೇ ಘಟನೆ ಮೈಸೂರಿನಲ್ಲಿ ವರದಿಯಾಗಿದೆ. ಕೆಳ ಜಾತಿ ಯುವಕನನ್ನು ಪ್ರೀತಿಸುತ್ತಿದ್ದ 23 ವರ್ಷದ ಮಗಳಿಗೆ ಪೋಷಕರೇ ಮಾವಿನ ಜ್ಯೂಸಿನಲ್ಲಿ ವಿಷ ಹಾಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮೈಸೂರಿನ ನಂಜನಗೂಡಿನ ಚಂದ್ರವಾಡಿ ಗ್ರಾಮದಲ್ಲಿ ಮಧು ಕುಮಾರಿ ನಿಗೂಢವಾಗಿ ಸಾವನ್ನಪ್ಪಿದ್ದಳು. ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೆತ್ತವರು ಪೊಲೀಸರಿಗೂ ತಿಳಿಸದೆ ಮಗಳ ಅಂತ್ಯಸಂಸ್ಕಾರವನ್ನು ಆತುರದಲ್ಲಿ ಮಾಡಿ ಮುಗಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಮಧುವಿನ ತಂದೆ ಹಾಗೂ ಅಣ್ಣ ವಿಚಾರಣೆಗೊಳಪಡಿಸಿದಾಗ ತಮ್ಮ ಮಗಳು ಕೆಳ ಜಾತಿ ಯುವಕನನ್ನು ಪ್ರೀತಿಸುತ್ತಿದ್ದು, ಮರ್ಯಾದೆಗೆ ಅಂಜಿ ಆಕೆಗೆ ವಿಷವುಣಿಸಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಮೈಸೂರು ಜಿಲ್ಲಾ ಎಸ್ಪಿ ಅಭಿನವ್ ಖರೆ ಮಾಹಿತಿ ನೀಡಿದ್ದಾರೆ. ಸದ್ಯ ತಂದೆ ಹಾಗೂ ಅಣ್ಣ ಪೊಲೀಸರ ವಶದಲ್ಲಿದ್ದಾರೆ.

ಮಧು ಕುಮಾರಿ ಅದೇ ಊರಿನ ಕೆಳ ಜಾತಿಯ ಜಯರಾಂ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇದನ್ನು ವಿರೋಧಿಸಿದ ಪೋಷಕರು ಆಕೆಗೆ ಸಂಬಂಧಿ ಹುಡುಗನೊಂದಿಗೆ ವಿವಾಹ ನಿಶ್ಚಯ ಮಾಡಿ ಲಗ್ನ ಪತ್ರಿಕೆಯನ್ನು ಹಂಚುತ್ತಿದ್ದರು. ಆದರೆ, ತನಗೆ ಮದುವೆ ಬೇಡ ಎಂದು ನಿರಾಕರಿಸುತ್ತಿದ್ದ ಮಗಳನ್ನು ಕಡೆಗೆ ವಿಷವುಣಿಸಿ ಹತ್ಯೆ ಮಾಡಿದ್ದರು.

Write A Comment