ಹೈದರಾಬಾದ್: ದಕ್ಷಿಣ ಭಾರತದ ಚಿತ್ರರಂಗದಲ್ಲಿ ದಾಖಲೆ ಮೇಲೆ ದಾಖಲೆ ಬರೆದ ಚಿತ್ರ ಬಾಹುಬಲಿ. ಇದೀಗ 2ನೇ ಅವತರಿಣಿಕೆಯಲ್ಲಿ ಕಟ್ಟಪ್ಪಾ ಬಾಹುಬಲಿಯನ್ನು ಯಾಕೆ ಕೊಂದ ಎನ್ನುವ ಉತ್ತರಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಆದ್ರೆ ಬಾಹುಬಲಿ ಕಥೆ ಬರೆದಿರುವ ವಿಜೇಂದ್ರ ಪ್ರಸಾದ್ ಹೇಳಿಕೆ ಬಾಹುಬಲಿ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡಿಸಿದೆ.
ಹೌದು. ಬಾಹುಬಲಿ ಚಿತ್ರ ನೋಡಿದ ಸಿನಿಪ್ರೇಕ್ಷಕರಲ್ಲಿ ಮೂಡಿದ ಒಂದೇ ಪ್ರಶ್ನೆ ಕಟ್ಟಪ್ಪ ಬಾಹುಬಲಿಯನ್ನು ಕೊಂದಿದ್ದೇಕೆ ಎನ್ನುವುದು. ಅದರ ಉತ್ತರ ಬಾಹುಬಲಿ 2ರ ಅವತರಿಣಿಕೆಯಲ್ಲಿ ಸಿಗಲಿದೆ ಎನ್ನುವುದು ಪ್ರೇಕ್ಷಕರ ನಿರೀಕ್ಷೆ. ಆದ್ರೆ ಚಿತ್ರ ನಿರ್ದೇಶಕ ಎಸ್ಎಸ್ ರಾಜಮೌಳಿ ಅವರ ತಂದೆ ಹಾಗೂ ಚಿತ್ರಕಥೆ ಬರೆದ ವಿಜೇಂದ್ರ ಪ್ರಸಾದ್ ಸಂದರ್ಶನದಲ್ಲಿ ಬಾಹುಬಲಿ ಸತ್ತಿದ್ದಾನೆ ಎಂದು ಅಂದುಕೊಳ್ಳುವುದೇಕೆ, ಆತ ಬದುಕಿರಲುಬಹುದು ಎಂಬ ಹೇಳಿಕೆ ಪ್ರೇಕ್ಷಕರ ನಿರೀಕ್ಷೆಯನ್ನೇ ತಲೆಕೆಳಗಾಗಿಸಿದೆ.
ಖಾಸಗಿ ವಾಹಿನಿಯೊಂದು ವಿಜೇಂದ್ರ ಪ್ರಸಾದ್ ಅವರಿಗೆ ಬಾಹುಬಲಿಯನ್ನು ಕಟ್ಟಪ್ಪ ಕೊಂದಿದ್ದು ಯಾಕೆ ಎನ್ನುವ ಪ್ರಶ್ನೆಯನ್ನು ಕೇಳಿದೆ. ಅದಕ್ಕೆ ಪ್ರಸಾದ್ ಆತ ಸತ್ತಿದ್ದಾನೆ ಎಂದು ಯಾಕೆ ಹೇಳ್ತೀರಾ. ಆತ ಬದುಕಿರಲುಬಹುದಲ್ಲ ಎನ್ನುವ ಉತ್ತರ ನೀಡಿದ್ದಾರೆ. ಅಲ್ಲದೇ 2ನೇ ಅವತರಿಣಿಕೆಯ ಕಥೆಯನ್ನು ಬಾಹುಬಲಿ ದಿ ಬಿಗಿನಿಂಗ್ ತೆರೆಗೆ ಬರುವ ಮುನ್ನವೇ ಬರೆದಾಗಿತ್ತು. ಹೀಗಾಗಿ ಚಿತ್ರಕಥೆಯಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.