ಕರ್ನಾಟಕ

15 ಕೆಜಿ ತೂಕ ಕಡಿಮೆ ಮಾಡಿಕೊಂಡು ತನ್ನ ಮೈಮಾಟಕ್ಕೆ ಹೊಸ ಲುಕ್ ನೀಡಿದ ನಟಿ ರಾಗಿಣಿ

Pinterest LinkedIn Tumblr

Ragini Dwivedi

ಸಾಹಸ ಪ್ರದಾನ ಚಿತ್ರಗಳಿಗಾಗಿ ತಮ್ಮ ತೂಕದ ಬಗ್ಗೆ ಹೆಚ್ಚು ಒಲವು ತೋರದಿದ್ದ ರಾಗಿಣಿ ಇದೀಗ ಬರೋಬ್ಬರಿ 15 ಕೆಜಿ ತೂಕ ಕಡಿಮೆ ಮಾಡಿಕೊಂಡು ತಮ್ಮ ಮೈಮಾಟಕ್ಕೆ ಹೊಸ ಲುಕ್ ತಂದುಕೊಂಡಿದ್ದಾರೆ.

ರಾಗಿಣಿ ಇದೀಗ ನಾನೇ ನೆಕ್ಸ್ಟ್ ಸಿಎಂ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಹಾಡಿನ ಚಿತ್ರೀಕರಣಕ್ಕಾಗಿ ಮನಾಲಿಗೆ ಹೋಗಿದ್ದ ಅವರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ನಾನೇ ನೆಕ್ಸ್ಟ್ ಸಿಎಂ ಚಿತ್ರದ ಜತೆ ಜೋ ಸೈಮನ್ ಪುತ್ರ ಜಿತೇಂದ್ರ ಜೋಸೈಮನ್ ನಿರ್ದೇಶನದ ಹುಲಿ ದೇವರ ಕಾಡು ಚಿತ್ರದ ಶೂಟಿಂಗ್ ನಲ್ಲೂ ಪಾಲ್ಗೊಂಡಿದ್ದಾರೆ. ಈ ಚಿತ್ರದಲ್ಲಿ ಐದಾರು ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಒಂದು ಪಾತ್ರದಲ್ಲಿ ಒಂದು ಗೆಟಪ್ ಗೆ ತುಂಬಾ ಸಣ್ಣಗಾಗಬೇಕಿತ್ತಂತೆ. ಅದಕ್ಕಾಗಿ ಬಾಡಿಯ ತೂಕವನ್ನು ಇಳಿಸಿಕೊಂಡೆ ಎಂದು ರಾಗಿಣಿ ಹೇಳಿದ್ದಾರೆ.

ಕಳೆದ ಎರಡೂವರೆ ತಿಂಗಳಿನಿಂದ ತೂಕ ಇಳಿಸಿಕೊಳ್ಳುವಲ್ಲಿ ರಾಗಿಣಿ ನಿರತರಾಗಿದ್ದಾರಂತೆ. ಇದಕ್ಕಾಗಿ ಯೋಗ ದ ಮೋರೆ ಹೋಗಿದ್ದ ಅವರು 2000 ಸಾವಿರ ಕ್ಯಾಲೊರಿಗಳಿಂದ 500 ಕ್ಯಾಲೋರಿಗಳಿಗೆ ಇಳಿಸಿದ್ದಾರೆ. ಹೆಚ್ಚಾಗಿ ದ್ರವ ಆಹಾರ ಸೇವಿಸುತ್ತಿದ್ದೇನೆ ಇದು ಕಷ್ಟದ ಕೆಲಸ ಆದರು ತೂಕ ಇಳಿಸುವ ಮನಸ್ಸು ಮಾಡಿದ್ದರಿಂದ ಸರಿಸುಮಾರು 15 ಕೆಜಿಯಷ್ಟು ತೂಕ ಇಳಿಸಿಕೊಂಡಿರುವುದಾಗಿ ರಾಗಿಣಿ ಎಂದು ಹೇಳಿದ್ದಾರೆ.

Write A Comment