ಕರ್ನಾಟಕ

ನಿಡುಮಾಮಿಡಿ ಶ್ರೀಗಳ ತಾಯಿ ಗಿರಿಜಮ್ಮ ನಿಧನ

Pinterest LinkedIn Tumblr

swaameeji

ಬೆಂಗಳೂರು: ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರ ಪೂರ್ವಾಶ್ರಮದ ತಾಯಿ ಗಿರಿಜಮ್ಮ (85) ಅವರು ಭಾನುವಾರ ಬೆಂಗಳೂರಿನಲ್ಲಿ ನಿಧನರಾದರು.

ಚಿತ್ರದುರ್ಗ ಮೂಲದ ಅವರು ಸ್ವಾತಂತ್ರ್ಯ ಯೋಧ ಸಾರಂಗಮಠದ ಗಂಗಾಧರಯ್ಯ ಅವರ ಪತ್ನಿಯಾಗಿದ್ದಾರೆ. ಅವರಿಗೆ ನಾಲ್ವರು ಗಂಡು ಮಕ್ಕಳು ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಈ ಪೈಕಿ ಪರಮಶಿವ ರಾಜದೇಶಿಕೇಂದ್ರ ಅವರು ಶ್ರೀಶೈಲ ಸಾರಂಗಮಠದ ಸ್ವಾಮೀಜಿಯಾಗಿದ್ದು, ಪುತ್ರಿ ಸುನಂದಮ್ಮ ಕೂಡ ಸನ್ಯಾಸಿನಿಯಾಗಿದ್ದಾರೆ.

ಸಾರ್ವಜನಿಕರ ದರ್ಶನಕ್ಕಾಗಿ ಮೃತದೇಹವನ್ನು ಸೋಮವಾರ (ಏಪ್ರಿಲ್ 11) ಮಧ್ಯಾಹ್ನ 2.30ರವರೆಗೆ ನಗರದ ಲಾಲ್‌ಬಾಗ್ ಪಶ್ಚಿಮ ದ್ವಾರದ ಬಳಿ ಇರುವ ನಿಡುಮಾಮಿಡಿ ಮಠದ ಆವರಣದಲ್ಲಿ ಹಾಗೂ ಸಂಜೆ 6ಕ್ಕೆ ಬಾಗೇಪಲ್ಲಿ ತಾಲ್ಲೂಕಿನ ಗೂಳೂರು ಮಹಾಸಂಸ್ಥಾನದ ವೃದ್ಧಾಶ್ರಮದಲ್ಲಿ ಇಡಲಾಗುವುದು.

ಅಂತ್ಯಕ್ರಿಯೆಯು ಬಾಗೇಪಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನಿಡುಮಾಮಿಡಿ ಮಠದ ಜಮೀನಿನಲ್ಲಿ ಏಪ್ರಿಲ್ 12ರಂದು, ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಮಠದ ಮೂಲಗಳು ತಿಳಿಸಿವೆ.

Write A Comment