ಕನ್ನಡ ವಾರ್ತೆಗಳು

ಆದಿನಾಥಸ್ವಾಮಿ ಬಸದಿಯ ಪಂಚಲೋಹ ವಿಗ್ರಹಗಳು ಕಾಡಿನಲ್ಲಿ ಪತ್ತೆ

Pinterest LinkedIn Tumblr

karakl_idial_theft_1

ಕಾರ್ಕಳ, ಏ.11 : ಶಿರ್ಲಾಲು ಶ್ರೀ ಆದಿನಾಥಸ್ವಾಮಿ ಬಸದಿಯಲ್ಲಿ ಕಳವು ಆಗಿರುವ ಲಕ್ಷಾಂತರ ಬೆಲೆಬಾಳುವ ಅಮೂಲ್ಯ ಪಂಚಲೋಹ ವಿಗ್ರಹಗಳು ಅಂಡಾರು ಮಂಗಪ್ಪಾಡಿ ಎಂಬಲ್ಲಿ ಪತ್ತೆಯಾಗಿದೆ.

ಕಾರ್ಕಳದ ಶಿರ್ಲಾಲು ಜೈನ ಬಸದಿಯಿಂದ ಹಲವು ತಿಂಗಳ ಹಿಂದೆ ವಿಗ್ರಹಗಳನ್ನು ಕಳವುಗೈಯಲಾಗಿತ್ತು. ಇದೀಗ ಇದೇ ಬಸದಿಗೆ ಸಂಬಂಧಪಟ್ಟ, ಕಳವುಗೈಯಲಾದ ಕೆಲವು ವಿಗ್ರಹಗಳು ಅಜೆಕಾರು ಸಮೀಪದ ಅಂದಾರು ಅರಣ್ಯ ಪ್ರದೇಶದಲ್ಲಿ ಗೋಣಿ ಚೀಲದಲ್ಲಿ ತುಂಬಿಸಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

karakl_idial_theft_2

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಅಜೆಕಾರು ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆಯ ನಂತರ ಉಳಿದ ವಿಗ್ರಹಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಲಿದ್ದಾರೆ ಎಂದು ತಿಳಿದು ಬಂದಿದೆ.

Write A Comment