ಕರ್ನಾಟಕ

ಯಶ್ -ರಾಧಿಕಾ ಪಂಡಿತ್ ಮೂರನೇ ಬಾರಿಗೆ ತೆರೆಗೆ

Pinterest LinkedIn Tumblr

Santhu

ನಿರ್ಮಾಪಕ ಕೆ. ಮಂಜು ಅವರ ನಿರ್ಮಾಣದಲ್ಲಿ ಮಹೇಶ್ ರಾವ್ ನಿರ್ದೇಶನದ ಯಶ್ ಮತ್ತು ರಾಧಿಕಾ ಪಂಡಿತ್ ಮೂರನೇ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಚಿತ್ರಕ್ಕೆ ಕೊನೆಗೂ ಹೆಸರು ಪಕ್ಕಾ ಆಗಿದೆ.

ಮೊದಲಿಗೆ ಚಿತ್ರಕ್ಕೆ ಮಾಂಜಾ ಅಂತ ಶೀರ್ಷಿಕೆಗೆ ಚಿತ್ರ ತಂಡ ಮುಂದಾಗಿತ್ತು. ಇದೀಗ ಮಾಂಜಾ ಬದಲಿಗೆ ಚಿತ್ರಕ್ಕೆ ಸಂತು ಸ್ಟ್ರೇಟ್ ಫಾರ್ವರ್ಡ್ ಅಂತ ಹೆಸರು ಪಕ್ಕಾ ಆಗಿದೆ. ಚಿತ್ರದ ಫಸ್ಟ್ ಲುಕ್ ಅನ್ನು ನಟಿ ರಾಧಿಕಾ ಪಂಡಿತ್ ತಮ್ಮ ಟ್ವೀಟರ್ ನಲ್ಲಿ ಶೇರ್ ಮಾಡಿದ್ದಾರೆ.

‘ಸಂತು ಸ್ಟ್ರೇಟ್ ಫಾರ್ವರ್ಡ್’ ಚಿತ್ರಕ್ಕೆ ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಈಗಾಗಲೇ ಯಶ್, ರಾಧಿಕಾ ಮತ್ತು ತಮಿಳಿನ ಶ್ಯಾಮ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Write A Comment