ರಾಷ್ಟ್ರೀಯ

ಮತ್ತೆ ವಿವಾದದಲ್ಲಿ ಕನ್ಹಯ್ಯಾ !

Pinterest LinkedIn Tumblr

Kanhaiya Kumar

ನವದೆಹಲಿ: ದೇಶದ್ರೋಹ ಆರೋಪ ಎದುರಿಸಿ ಸಾಕಷ್ಟು ಸುದ್ದಿಗೆ ಗ್ರಾಸವಾಗಿದ್ದ ಜೆಎನ್ ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರು ಭಾನುವಾರ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡುವ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಭಾರತ್ ಮಾತಾ ಕಿ ಜೈ ವಿವಾದ ಕುರಿತಂತೆ ಮಾತನಾಡಿರುವ ಕನ್ಹಯ್ಯಾ ಕುಮಾರ್, ಕೆಲವರು ಹೇಳುತ್ತಾರೆ ರಾಷ್ಟ್ರ ಎಲ್ಲವೂ ಆಗಿದ್ದು, ಭಾರತ್ ಮಾತಾ ಕಿ ಜೈ ಎಂದು ಕೂಗಲೇಬೇಕು ಎಂದು ಹೇಳುತ್ತಾರೆ. ಹೀಗಾಗಿ, ಮುಂದೆ ನಾನು ವಿವಾಹವಾದಾಗ ನನ್ನ ಪತ್ನಿಗೆ ಭಾರತ್ ಮಾತಾ ಕಿ ಜೈ ಎಂದು ಹೆಸರಿಡುತ್ತೇನೆ. ಜೊತೆಗೆ ನಾನು ಸಹ ನನ್ನ ಹೆಸರನ್ನು ಭಾರತ್ ಮಾತಾ ಕೀ ಜೈ ಎಂದು ಬದಲಾಯಿಸಿಕೊಳ್ಳಿತ್ತೇನೆ. ಇಷ್ಟೇ ಅಲ್ಲ ಮುಂದೆ ಹುಟ್ಟುವ ನನ್ನ ಮಗುವಿಗೂ ಭಾರತ್ ಮಾತಾ ಕೀ ಜೈ ಎಂಹು ಹೆಸರಿಡುತ್ತೇನೆಂದು ಹೇಳಿದ್ದಾರೆ.

ನಮ್ಮ ಮಕ್ಕಳು ಶಾಲೆಗೆ ಹೋದಾಗ ಶಿಕ್ಷಕರು ಅವರನ್ನು ನಿಮ್ಮ ತಂದೆ, ತಾಯಿ ಹೆಸರೇನು ಎಂದು ಕೇಳಿದಾಗ ಅವರು ಭಾರತ್ ಮಾತಾ ಕೀ ಜೈ ಎಂದು ಹೇಳುತ್ತಾರೆ. ಇದರಿಂದ ಅವರಿಗೆ ಉಚಿತವಾಗಿ ಶಿಕ್ಷಣ ದೊರೆಯುವುದರ ಜೊತೆಗೆ ಶಾಲೆಗೆ ಶುಲ್ಕ ಕಟ್ಟುವ ಅಗತ್ಯವಿರುವುದಿಲ್ಲ ಎಂದು ಹೇಳಿದ್ದಾರೆ.

1 Comment

Write A Comment