ಮನೋರಂಜನೆ

ಪಾಕಿಸ್ತಾನಿ ಪ್ರೇಮಿಗಳ ಪಾತ್ರ ನಿರ್ವಹಿಸಲಿರುವ ಅನುಷ್ಕಾ ಫವಾದ್ ಖಾನ್

Pinterest LinkedIn Tumblr

Fawad Khan-anushka

ಎ ದಿಲ್ ಹೈ ಮುಷ್ಕಿಲ್ ಚಿತ್ರದಲ್ಲಿ ಫವಾದ್ ಖಾನ್ ನಿರ್ವಹಿಸುತ್ತಿರುವ ಪಾತ್ರವನ್ನು ವಿಸ್ತರಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಈಗ ಮತ್ತೊಂದು ಅನುಷ್ಕಾ ಶರ್ಮಾ ಈ ಚಿತ್ರದಲ್ಲಿ ನಟಿಸಲಿದ್ದಾರೆ ಮಾಹಿತಿ ದೊರೆತಿದೆ.

ಚಿತ್ರದ ಬಗ್ಗೆ ಮಾಹಿತಿ ಇರುವ ಮೂಲದಿಂದ ಈ ಸುದ್ದಿ ಹೊರಬಂದಿದೆ. ಅನುಷ್ಕಾ ಶರ್ಮಾ, ಫವಾದ್ ಖಾನ್ ಪಾಕಿಸ್ತಾನ ಮೂಲದ ಯುವಕ ಹಾಗೂ ಯುವತಿಯ ಪಾತ್ರ ನಿರ್ವಹಿಸುತ್ತಿದ್ದಾರೆ. ವಿದೇಶದಲ್ಲಿ ಭೇಟಿಯಾಗುವ ಪಾಕಿಸ್ತಾನ ಮೂಲದವರ ಪ್ರೇಮಕಥೆ ಚಿತ್ರಕಥೆಯಾಗಿದೆ. ಫವಾದ್ ಖಾನ್ ಡಿಜೆ ಪಾತ್ರದಲ್ಲಿ ಕಾಣಿಸಿಕೊಂಡರೆ ಅನುಷ್ಕಾಗೆ ನವಾಬಿ ಕುಟುಂಬದ ಹಿನ್ನೆಲೆಯುಳ್ಳ ಪಾತ್ರವನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ವಿದೇಶದಲ್ಲಿರುವ ಪಾಕಿಸ್ತಾನ ಮೂಲದ ಯುವಕ ಹಾಗೂ ಯುವತಿ ತಮ್ಮ ಪ್ರೀತಿಯ ಬಗ್ಗೆ ಕುಟುಂಬ ಸದಸ್ಯರಿಗೆ ತಿಳಿಸುತ್ತಾರೆ. ಆದರೆ ಇದಕ್ಕೆ ಕುಟುಂಬ ಸದಸ್ಯರು ಒಪ್ಪುವುದಿಲ್ಲ ಇದರಿಂದ ಖಿನ್ನಲಾಗುವ ಅನುಷ್ಕಾ ಶರ್ಮಾ ಮನೆಯನ್ನು ತೊರೆಯುತ್ತಾಳೆ. ಚಿತ್ರದ ಕೊನೆಯಲ್ಲಿ ಪ್ರೇಮಿಗಳು ಒಂದಾಗುತ್ತಾರಾ ಇಲ್ಲವಾ ಎಂಬುದನ್ನು ಈ ವರೆಗೂ ಅಂತಿಮವಾಗಿಲ್ಲ. ಕರಣ್ ಜೋಹರ್ ನಿರ್ದೇಶನದ ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್ ರಣ್ಬೀರ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Write A Comment