ಕರ್ನಾಟಕ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರ್ ಪುತ್ರ ಅಬ್ಬಾಸ್ ಟಾಲಿವುಡ್ ಗೆ ಎಂಟ್ರಿ ! ಮೊದಲ ಚಿತ್ರದಲ್ಲೇ ಮೂವರು ನಾಯಕಿಯರೊಂದಿಗೆ ರೋಮ್ಯಾನ್ಸ್

Pinterest LinkedIn Tumblr

Abbas

ಹೈದರಾಬಾದ್: ತೆಲುಗು ಚಿತ್ರರಂಗಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಪುತ್ರ ಅಬ್ಬಾಸ್ ಚಲನಚಿತ್ರ ರಂಗಕ್ಕೆ ಎಂಟ್ರಿಕೊಡುತ್ತಿದ್ದು, ಮೊದಲ ಚಿತ್ರದಲ್ಲೇ ಮೂವರು ನಾಯಕಿಯರೊಂದಿಗೆ ರೋಮ್ಯಾನ್ಸ್ ಮಾಡಲಿದ್ದಾರೆ.

ಇದ್ದರಿಕಿ ಕೊತ್ತೊಗಾ ಚಿತ್ರದ ಮೂಲಕ ಅಬ್ಬಾಸ್ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಕೆ. ಸುರೇಶ್ ಬಾಬು ನಿರ್ದೇಶನದ ಚಿತ್ರದಲ್ಲಿ ತೆರೆಯ ಮೇಲೆ ಕಾಣಿಸಿಕೊಳ್ಳಲಿರುವ ಅಬ್ಬಾಸ್ ಜತೆ ತೆಲಗು ಚಿತ್ರರಂಗದ ಅನೇಕ ಹಿರಿಯ, ಅನುಭವಿ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.

ರೊಮ್ಯಾಂಟಿಕ್ ಕಥಾಸಾರ ಹೊಂದಿರುವ ಚಿತ್ರದಲ್ಲಿ ಅಬ್ಬಾಸ್ ಮೂವರು ಸುಂದರಿಯರೊಂದಿಗೆ ರೋಮ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳುವ ಮೂಲಕ ನಿರ್ದೇಶಕ ಸುರೇಶ್ ಬಾಬು ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ.

Write A Comment