ಕನ್ನಡ ವಾರ್ತೆಗಳು

ಶೀಲ ಶಂಕಿಸಿದ ಪತಿರಾಯ ಪ್ರೀತಿಸಿ ಮದುವೆಯಾದವಳಿಗೆ ಚೂರಿ ಇರಿದ- ಆಸ್ಪತ್ರೆಗೆ ದಾಖಲಿಸಿ, ಪೊಲೀಸರಿಗೆ ಶರಣಾದ..!

Pinterest LinkedIn Tumblr

ಕುಂದಾಪುರ: ಪತ್ನಿಯ ನಡವಳಿಕೆ, ಅತಿಯಾದ ಮೊಬೈಲ್ ಸಂಭಾಷಣೆ, ತನ್ನನ್ನು ದೂರವಿಡುತ್ತಿದ್ದಾಳೆ ಅನ್ನುವ ಭಾವನೆಯ ನಡುವೆಯೇ ಗಂಡ-ಹೆಂಡಿರ ನಡುವಿನ ವಿರಸದ ಜಟಾಪಟಿಯೊಂದು ಹೆಂಡತಿಗೆ ಚೂರಿ ಇರಿಯುವ ಹಂತಕ್ಕೆ ತಲುಪಿದ ಘಟನೆ ಕುಂದಾಪುರ ತಾಲೂಕಿನ ಬಿದ್ಕಲ್‌ಕಟ್ಟೆ ಎಂಬಲ್ಲಿನ ತಮ್ಮ ಬಾಡಿಗೆ ನಿವಾಸದಲ್ಲಿ ನಡೆದಿದೆ.

ಬಿದ್ಕಲ್‌ಕಟ್ಟೆ ನಿವಾಸಿಯಾದ ರೇಣುಕಾ(25) ಎನ್ನುವಾಕೆಯೇ ಗಂಡನಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡವರು. ಮಡಿಕೇರಿ ಮೂಲದ ಸುರೇಶ್ (33) ಪತ್ನಿಗೆ ಚೂರಿ ಇರಿದ ಆರೋಪಿ.

Kundapura_Couple_Fighting (3)

ನಡೆದ ಘಟನೆ: ಶುಕ್ರವಾರ ಸಂಜೆ ಬಿದ್ಕಲ್‌ಕಟ್ಟೆಯ ಬಾಡಿಗೆ ಮನೆಯಲ್ಲಿದ್ದ ಇವರ ಕೋಣೆಯ ಭಾಗದಿಂದ ಮಹಿಳೆಯ ಆರ್ತನಾಧವೊಂದು ಸಮೀಪದ ಮಾಲೀಕರ ಮನೆಗೆ ಕೇಳಿಸುತ್ತದೆ. ಕೂಡಲೇ ಹೊರಬಂದು ಬಾಡಿಗೆ ಮನೆಯ ಮಾಲೀಕರ ಪತ್ನಿ ನೋಡುವಾಗ ರಕ್ತ ಒಸರುತ್ತಿದ್ದ ಕುತ್ತಿಗೆಯನ್ನು ಕೈಯಲ್ಲಿ ಹಿಡಿದು ರೇಣುಕಾ ಕೂಗುತ್ತಾ ಓಡಿಬರುತ್ತಿದ್ದಾಳೆ. ಹಿಂಬದಿಯಿಂದ ಆಕೆಯ ಪತಿ ಸುರೇಶನೂ ಗಾಬರಿಯಿಂದ ಬರುತ್ತಿದ್ದಾನೆ. ಏನೋ ಅಚಾತುರ್ಯವಾಗಿದೆಯೆಂಭುದನ್ನು ಅರಿತ ಬಾಡಿಗೆ ಮನೆಯ ಮಾಲೀಕರ ಪತ್ನಿ ಇದೇ ಸುರೇಶನ ಆಟೋ ರಿಕ್ಷಾದಲ್ಲಿ ಕುಳ್ಳೀರಿಸಿಕೊಂಡು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಚಿಕಿತ್ಸೆ ಕೊಡಿಸುತ್ತಾರೆ. ಬಳಿಕ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ.ಗೆ ದಾಖಲಿಸಲಾಗುತ್ತದೆ.

Kundapura_Couple_Fighting (2) Kundapura_Couple_Fighting (1) Kundapura_Couple_Fighting (5) Kundapura_Couple_Fighting (4)

ಇವರದ್ದು ಪ್ರೇಮ ವಿವಾಹ…..
ಸುಮಾರು 8 ವರ್ಷಗಳ ಹಿಂದೆ ಅದ್ಯಾವುದೋ ಸಮಾರಂಭದಲ್ಲಿ ಒಬ್ಬರನ್ನೊಬ್ಬರು ನೋಡಿ ಇಷ್ಟಪಟ್ಟ ರೇಣುಕಾ ಹಾಗೂ ಸುರೇಶ್ ನಡುವೆ ಪ್ರೇಮಂಕುರವಾಗಿದ್ದು ಬಳಿಕ ಇಬ್ಬರು ಮದುವೆಯಾಗುವ ನಿರ್ಧಾರ ಮಾಡಿ ಊರು ಬಿಟ್ಟು ಓಡಿಹೋಗಿ ಮಡಿಕೇರಿಯಲ್ಲಿ ಹಸೆಮಣೆ ಏರುತ್ತಾರೆ. ಪ್ರೇಮವಿವಾಹಕ್ಕೆ ರೇಣುಕಾ ಮನೆಯಲ್ಲಿ ವಿರೋಧವಿದ್ದ ಕಾರಣ ಹಲವು ವರ್ಷ ಮಡಿಕೇರಿಯಲ್ಲಿ ಜೀವನ ಸಾಗಿಸಿದ ಇಬ್ಬರಿಗೂ ಆರು ವರ್ಷ ಪ್ರಾಯದ ಓರ್ವ ಗಂಡು ಮಗನಿದ್ದಾನೆ. ಹೀಗೆಯೇ ಮನೆಯವರ ಕೋಪ ಕಮಿಯಾಗುತ್ತಿದ್ದಂತೆಯೇ ಇಬ್ಬರು ಬಿದ್ಕಲ್‌ಕಟ್ಟೆಗೆ ಆಗಮಿಸುತ್ತಾರೆ. ಇಲ್ಲಿ ಒಂದಷ್ಟು ವರ್ಷ ಸುರೇಶ್ ಕೂಲಿಕಾರ್ಯ ಮಾಡಿ ರೇಣುಕಾಳನ್ನು ಸಾಕುತ್ತಾನೆ. ಬಳಿಕ ಕೆಲವು ತಿಂಗಳುಗಳಿಂದ ಮಡಿಕೇರಿಗೆ ಹೋಗಿ ಅಲ್ಲಿ ಆಟೋರಿಕ್ಷಾ ಓಡಿಸಿಕೊಂಡು ದುಡಿಮಾಡುತ್ತಿರುತ್ತಾನೆ. ಇತ್ತ ರೇಣುಕಾ ತನ್ನ ಸಹೋದರಿ ಮನೆಯಲ್ಲಿ ಪುತ್ರನೊಂದಿಗೆ ವಾಸವಿದ್ದು ಸ್ಥಳೀಯ ಸಹಕಾರಿ ಸಂಘವೊಂದರಲ್ಲಿ ಕೆಲಸ ಮಾಡಿಕೊಂಡಿರುತ್ತಾಳೆ. ಇತ್ತ ಗಂಡನನ್ನು ಮಡಿಕೇರಿಯಿಂದ ಒಂದು ತಿಂಗಳ ಹಿಂದೆ ಕರೆಸಿಕೊಂದ ರೇಣುಕಾ ಇಲ್ಲಿಯೇ ಕೆಲಸ ಮಾಡುವಂತೆ ತಿಳಿಸಿ ಹದಿನೈದು ದಿನಗಳ ಹಿಂದಷ್ಟೇ ಇಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರು ವಾಸವಿರುತ್ತಾರೆ.

ಗಂಡ-ಹೆಂಡಿರ ನಡುವೆ…..
ಸುಮಾರು ಒಂದು ತಿಂಗಳ ಹಿಂದೆ ಮಡಿಕೇರಿಯಿಂದ ಬಿದ್ಕಲ್‌ಕಟ್ಟೆಗೆ ಬಂದಿದ್ದ ಸುರೇಷನಿಗೆ ಇಲ್ಲಿ ಬಂದ ಮೇಲೆ ಕೆಲವು ವಿಚಾರಗಳು ಅಸ್ಪಷ್ಟವಾಗಿ ತಲೆಗೆ ಹೊಕ್ಕುಬಿಡುತ್ತದೆ. ತನ್ನ ಹೆಂಡತಿ ಮೊದಲಿನಂತಿಲ್ಲ ಎಂಬುದನ್ನು ಆತ ಅರ್ಥೈಸಿಕೊಳ್ಳಲು ಬಹಳಷ್ಟು ದಿನಗಳು ಬೇಕಾಗಿರಲಿಲ್ಲ. ಬೆಂಗಳುರಿನಲ್ಲಿರುವ ಸಂಬಂಧಿಕನೋರ್ವನ ಜೊತೆ ಆಕೆ ಹೆಚ್ಚು ಮೊಬೈಲ್ ಸಂಭಾಷಣೆಯಲ್ಲಿ ತೊಡಗಿರುವುದು ಮತ್ತು ಆತ ಒಂದೆರಡು ಬಾರಿ ಇಲ್ಲಿಗೆ ಬಂದು ಹೋದದ್ದು ಸುರೇಶನ ಅನುಮಾನಕ್ಕೆ ಇನ್ನಷ್ಟು ಬಲ ನೀಡಿತ್ತು. ಆದರೂ ತನ್ನ ಹೆಂಡತಿ ಬಗ್ಗೆ ಅನುಮಾನ ಪಡುವುದು ಸರಿಯಲ್ಲ, ಆಕೆ ಬಳಿ ಏನು ಕೇಳುವುದು ತಪ್ಪು ಎಂದು ಈತ ಎಲ್ಲವನ್ನೂ ತನ್ನೊಳಗೆ ಅಧುಮಿಟ್ಟುಕೊಂಡಿದ್ದ.ಆದರೇ ಒಂದೆರಡು ದಿನಗಳಿಂದ ರೇಣುಕಾ ತನ್ನನ್ನು ಬೆಂಗಳುರಿಗೆ ಕರೆದೊಯ್ಯುವಂತೆ ಪಟ್ಟು ಹಿಡಿದು ಕೂತಿದ್ದಳು. ಅದಕ್ಕೆ ಗಂಡ ಸುರೇಶ್ ಬಗ್ಗದಿದ್ದಾಗ ಇಬ್ಬರ ನಡುವೆ ಮಾತಿನ ಚಕಮಕಿಯೂ ನಡೆದಿತ್ತು. ಶುಕ್ರವಾರ ಸಂಜೆಯೂ ಕಾಫಿ ಕುಡಿದು ಮಾಮೂಲಿನಂತೆ ಇದ್ದ ಇಬ್ಬರ ನಡುವೆ ಬೆಂಗಳೂರಿಗೆ ಹೋಗುವ ವಿಚಾರ ಬಂದಿದೆ. ಇದೇ ಕಾರಣದಲ್ಲಿ ಮಾತಿಗೆ ಮಾತು ಬೆಳೆದು ತರಕಾರಿ ಕತ್ತರಿಸಲು ರೇಣುಕಾ ಕೈಯಲ್ಲಿದ್ದ ಚಾಕು ತೆಗೆದು ಕುತ್ತಿಗೆಗೆ ಬೀಸಿದ್ದಾನೆ. ಆಕೆ ಕೂಡಲೇ ಚೀರಿಕೊಂಡಾಗ ಕೋಪದಲ್ಲಿದ್ದ ಸುರೇಶ್ ಪ್ರಜ್ನಾವಸ್ಥೆಗೆ ಬಂದು ಹೆಂಡತಿಯನ್ನು ಕಾಪಾಡಲು ಅಕೆಯ ಬಳಿ ಹೋಗಿದ್ದಾನೆ. ಆಗಲೂ ತಪ್ಪಿಸಿಕೊಳ್ಳುವ ಬರದಲ್ಲಿ ಆಕೆಯ ಹೊಟ್ಟೆಗೆ ಚೂರಿ ತಗುಲಿದೆ ಎನ್ನುವುದು ಆಕೆಯ ಪತಿಯೇ ಹೇಳುವ ಸಂಗತಿಗಳು.

ಆಸ್ಪತ್ರೆಗೆ ಬಿಟ್ಟು, ಪೊಲೀಸರಿಗೆ ಶರಣಾದ..!
ತನ್ನ ರೀಕ್ಷಾದಲ್ಲಿ ಪತ್ನಿ ಹಾಗೂ ಬಾಡಿಗೆ ಮನೆಯ ಮಾಲೀಕರ ಪತ್ನಿಯನ್ನು ಕುಳ್ಳೀರಿಸಿಕೊಂಡು ಕೋಟೇಶ್ವರದತ್ತ ಸಾಗಿ ಅಲ್ಲಿ ಆಸ್ಪತ್ರೆಗೆ ಬಿಟ್ಟ ಸುರೇಶ್ ಹಿಂದೆಮುಂದೆ ನೋಡದೇ ಕೂಡಲೇ ಸಾಗಿದ್ದು ಕುಂದಾಪುರ ಪೊಲೀಸ್ ಠಾಣೆಗೆ. ಅಪರಾಧ ನಡೆದ ವ್ಯಾಪ್ತಿ ಕುಂದಾಪುರ ಠಾಣೆ ಸರಹದ್ದಿಗೆ ಬಾರದಿದ್ದರೂ ಕೂಡ ಆತ ಕುಂದಾಪುರ ಪೊಲೀಸರ ಮುಂದೆ ತಾನೂ ಮಾಡಿದ ತಪ್ಪನ್ನು ಒಪ್ಪಿಕೊಂಡು ವಿಚಾರಗಳನ್ನು ತಿಳಿಸುತ್ತಾನೆ. ಕೂದಲೇ ಪೊಲೀಸರು ಕೋಟ ಠಾಣೆಗೆ ಮಾಹಿತಿ ನೀಡಿದ್ದು ಕೋಟ ಪೊಲೀಸರು ಸುರೇಶನನ್ನು ವಶಕ್ಕೆ ಪಡೆಯುತ್ತಾರೆ. ಇತ್ತ ಸುರೇಶ್ ಪತ್ನಿ ರೇಣುಕಾ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಚೇತರಿಸಿಕೊಳ್ಳುತ್ತಿದ್ದಾರೆ.

ನಾನೇನು ತಪ್ಪು ಮಾಡಿಲ್ಲ…..
‘ನಾನು ಆಕೆಯನ್ನು ಪ್ರೀತಿಸಿ ಮದುವೆಯಾದೆ. ಬಡವನಾದರೂ ಆಕೆಗೆ ಏನು ಕೊರತೆ ಮಾಡಿಲ್ಲ. ಆದರೇ ಆಕೆ ಮಾತ್ರ ವರ್ಷಗಳಿಂದ ನನ್ನೊಂದಿಗೆ “ಯಾವ ವಿಚಾರದಲ್ಲಿಯೂ” ಸರಿಯಾಗಿಲ್ಲ. ಆಕೆ ಹೇಳಿದ್ದೇ ಆಗಬೇಕು ಎನ್ನುತ್ತಾಳೆ, ನಾನು ಅದಕ್ಕೆ ವಿರೋಧಿಸಿದರೇ ನನಗೆ ಹೊಡೆಯಲು ಬರುತ್ತಾಳೆ. ನಮ್ಮಿಬ್ಬರ ಮಧ್ಯೆ ಏನೂ ಸರಿಯಾಗಿಲ್ಲ. ನಾನು ಬಡವ, ಚೆನ್ನಾಗಿಲ್ಲ ಎನ್ನುವ ಕಾರಣವೋ ಏನೋ ಆಕೆ ನನ್ನನ್ನು ದೂರವಿಟ್ಟಿದ್ದಾಳೆ. ನನ್ನ ತಂದೆ ತಾಯಿಗೆ ಹಣವನ್ನು ಕೊಡದ ನಾನು ದುಡಿದೆದ್ದಲ್ಲಾ ಹೆಂಡತಿಗಗಿ ಖರ್ಚು ಮಾಡಿದೆ. ಇನ್ನೂ ತುಂಬಾ ಸಾಲವಿದೆ. ಆಕೆಗೆ ಹೆಸರಿಗೆ ಮಾತ್ರ ನಾನೊಬ್ಬ ಗಂಡನಾಗಿ ಬೇಕು ಅಷ್ಟೇ..ಬೆಂಗಳೂರಿಗೆ ಕರೆದೊಯ್ಯುವುದಿಲ್ಲ ಎನ್ನುವ ಒಂದೇ ಕಾರಣಕ್ಕೆ ಇಷ್ಟೆಲ್ಲಾ ರಾದ್ಧಾಂತವಾಗಿದೆ. ಆಕೆ ಯಾರದ್ದೋ ಮಾತು ಕೇಳುತ್ತಿದ್ದಾಳೆ’ ಎನ್ನುತ್ತಾ ತನ್ನ ಮಡದಿ ಮೇಲೆ ಸುರೇಶ್ ಆರೋಪ ಮಾಡುತ್ತಾನೆ.

ಒಟ್ಟಿನಲ್ಲಿ ಹೆಂಡತಿ ಏನೇ ತಪ್ಪು ಮಾಡಲಿ ಅದನ್ನು ಒಂದು ವ್ಯವಸ್ಥೆಯಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಕೂತು ಮಾತನಾಡಿ ಪರಿಹರಿಸಿಕೊಳ್ಳಬಹುದಿತ್ತು. ಆದರೇ ಸುರೇಶ್ ಒಂದು ಕ್ಷಣ ಕೋಪದ ಕೈಗೆ ಬುದ್ದಿಕೊಟ್ಟು ಮಾಡಬಾರದ ತಪ್ಪನ್ನು ಮಾಡಿಬಿಟ್ಟಿದ್ದಾನೆ. ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮೊದಲು ಸಹನೀಯವಾಗಿ ವರ್ತಿಸಿದ್ದರೇ ಈತನಿಗೆ ಈ ಗತಿ ಬರುತ್ತಿರಲಿಲ್ಲ. ಸದ್ಯ ಆತ ಕೋಟ ಪೊಲೀಸರ ವಶದಲ್ಲಿದ್ದಾನೆ.

ಸುರೇಶನ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

Write A Comment