ಕರ್ನಾಟಕ

ಎಸಿಬಿ ಅರೆಜೀವ : ಕಾರ್ಯನಿರ್ವಹಣೆಗೆ ಹೈಕೋರ್ಟ್ ತಡೆ

Pinterest LinkedIn Tumblr

GVTಬೆಂಗಳೂರು- ಲೋಕಾಯುಕ್ತ ನಿಷ್ಕ್ರಿಯಗೊಳಿಸಿ ಎಸಿಬಿ ರಚಿಸಿದ್ದ ಸರ್ಕಾರಕ್ಕೆ ಮುಖಭಂಗವಾಗಿದೆ. ಲೋಕಾಯುಕ್ತದಲ್ಲಿ ದಾಖಲಾಗಿದ್ದ ಯಾವುದೇ ಮೊಕದ್ದಮೆಯನ್ನು ಎಸಿಬಿಗೆ (ಭ್ರಷ್ಟಾಚಾರ ನಿಗ್ರಹ ದಳ) ವರ್ಗಾವಣೆ ಮಾಡದಂತೆ ರಾಜ್ಯ ಹೈಕೋರ್ಟ್ ತಡೆ ನೀಡಿದೆ.
ಲೋಕಾಯುಕ್ತದಲ್ಲಿ ದಾಖಲಾಗಿರುವ ಮೊಕದ್ದಮೆಗಳನ್ನು ಹೊಸದಾಗಿ ರಚನೆಯಾಗಿರುವ ಭ್ರಷ್ಟಾಚಾರ ನಿಗ್ರಹದಳಕ್ಕೆ(ಎಸಿಬಿ) ವರ್ಗ ಮಾಡುತ್ತಿರುವುದನ್ನು ಪ್ರಶ್ನಿಸಿ ಚಿದಾನಂದ ಅರಸ್ ಎಂಬುವರು ಉಚ್ಛ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇಂದು ಈ ಅರ್ಜಿಯ ವಿಚಾರಣೆ ನ‌ಡೆಸಿದ ರಾಜ್ಯ ಹೈಕೋರ್ಟಿನ ವಿಭಾಗೀಯ ಪೀಠ ಲೋಕಾಯುಕ್ತದಿಂದ ಎಸಿಬಿಗೆ ಮೊಕದ್ದಮೆಗಳ ವರ್ಗಾವಣೆಗೆ ತಡೆ ನೀಡಿತು. ಈ ಸಂಬಂಧ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡುವಂತೆ ಸೂಚಿಸಿತು.
ಸಂವಿಧಾನದ 162ನೇ ಕಲಂನಂತೆ ಲೋಕಾಯುಕ್ತದಿಂದ ಮೊಕದ್ದಮೆಗಳನ್ನು ವರ್ಗಾವಣೆ ಮಾಡುವಂತಿಲ್ಲ ಮತ್ತು ಲೋಕಾಯುಕ್ತ ಪೊಲೀಸರ ತನಿಖೆ ವ್ಯಾಪ್ತಿಯನ್ನು ಕಸಿಯಲು ಬರುವುದಿಲ್ಲ ಎಂದು ಪಿಐಎಲ್ ಅರ್ಜಿದಾರರ ಪರ ವಕೀಲರಾದ ಮೌನೀಷ್ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಈ ವಾದವನ್ನು ಆಲಿಸಿದ ನ್ಯಾಯಪೀಠ ಮೊಕದ್ದಮೆಗಳ ವರ್ಗಾವಣೆಗೆ ತಡೆ ನೀಡಿ ವಿಚಾರಣೆಯನ್ನು ಈ ತಿಂಗಳ 12ಕ್ಕೆ ಮುಂದೂಡಿದೆ.
ಎಸಿಬಿ ರಚನೆಯಾದಾಗಿನಿಂದ ಹೈಕೋರ್ಟ್ ಸರ್ಕಾರದ ವಿರುದ್ಧ ಆಗಾಗ್ಗ ಚಾಟಿ ಬೀಸುತ್ತಿದ್ದು, ಮೊಕದ್ದಮೆಯೊಂದರ ವಿಚಾರಣೆ ಸಂದರ್ಭದಲ್ಲಿ ಕೆಲ ದಿನಗಳ ಹಿಂದೆ ನ್ಯಾಯಮೂರ್ತಿ ವೇಣುಗೋಪಾಲಗೌಡರವರು ಎಸಿಬಿ ರಚನೆಯ ವಿರುದ್ಧ ಗರಂ ಆಗಿ ಭ್ರಷ್ಟಾಚಾರದ ವಿರುದ್ಧ ಬಳ್ಳಾರಿಗೆ ಪಾದಯಾತ್ರೆ ನಡೆಸಿದವರು ಈಗ ಭ್ರಷ್ಟರ ರಕ್ಷಣೆಗೆ ನಿಂತಂತಿದೆ ಎಂದು ಕಿಡಿ ಕಾರಿದ್ದರು.

Write A Comment