ಕರ್ನಾಟಕ

ಸಹಕಾರಿ ಹಾಲು ಒಕ್ಕೂಟಗಳಿಗೆ 121 ಕೋಟಿ ರೂ. ಲಾಭ

Pinterest LinkedIn Tumblr

halu-okkutaಬೆಂಗಳೂರು: ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಮತ್ತು ಇದರ ಅಡಿಯಲ್ಲಿ
ಬರುವ 14 ಒಕ್ಕೂಟಗಳು 2015-16ನೇ ಸಾಲಿನಲ್ಲಿ ಒಟ್ಟು 11,140 ಕೋಟಿ ರೂ. ವಹಿವಾಟು ನಡೆಸಿ, 121 ಕೋಟಿ
ರೂ. ಲಾಭ ಗಳಿಸಿವೆ ಎಂದು ಕೆಎಂಎಫ್ ಅಧ್ಯಕ್ಷ ಪಿ. ನಾಗರಾಜು ತಿಳಿಸಿದ್ದಾರೆ.

ಕೆಎಂಎಫ್ ಕೇಂದ್ರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಎಂಎಫ್ 3,500 ಕೋಟಿ ರೂ. ವಹಿವಾಟು ನಡೆಸಿ 81 ಕೋಟಿ ರೂ. ಲಾಭ ಗಳಿಸಿದರೆ, ಎಲ್ಲ ಒಕ್ಕೂಟಗಳು 7,640 ಕೋಟಿ ರೂ. ವಹಿವಾಟು ನಡೆಸಿ 40 ಕೋಟಿ ರೂ. ಲಾಭ ಗಳಿಸಿವೆ. ಒಟ್ಟಾರೆ ಕೆಎಂಎಫ್ ಮತ್ತು ಒಕ್ಕೂಟಗಳು ವಾರ್ಷಿಕ 11,140 ಕೋಟಿ ರೂ. ವಹಿವಾಟು ನಡೆಸುವ ಮೂಲಕ 121 ಕೋಟಿ ರೂ. ಲಾಭ ಗಳಿಸಿವೆ. ಇದು ತೆರಿಗೆ ನಂತರದ ಲಾಭದ ಮೊತ್ತವಾಗಿದೆ ಎಂದು ವಿವರಿಸಿದರು.

ಕಳೆದ ವರ್ಷ ಕೆಎಂಎಫ್ ಒಟ್ಟಾರೆ 100 ಕೋಟಿ ರೂ. ಲಾಭ ಗಳಿಸಿತ್ತು. ಅದರಲ್ಲಿ 75 ರಿಂದ 80 ಕೋಟಿ ರೂ. ಗಳನ್ನು ರೈತರಿಗೆ ಜಾನುವಾರುಗಳ ಮೇವಿಗೆ ಸಬ್ಸಿಡಿ ರೂಪದಲ್ಲಿ ನೀಡಲಾಗಿತ್ತು. ಈ ಬಾರಿಯ ಲಾಭಾಂಶವನ್ನು ಮಹಾಮಂಡಳದ ಮೂಲಭೂತ ಸೌಕರ್ಯ ಅಭಿವೃದಿಟಛಿ ಕಾರ್ಯಗಳಿಗೆ ಬಳಸಿಕೊಳ್ಳುವ ಆಲೋಚನೆ ಇದ್ದು,
ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ನಾಗರಾಜು ತಿಳಿಸಿದರು.

ಅದೇ ರೀತಿ ಕ್ಷೀರಭಾಗ್ಯ ಯೋಜನೆಗೆ ಸರ್ಕಾರದಿಂದ ಇಲ್ಲಿವರೆಗೆ 1,248 ಕೋಟಿ ರೂ. ಹಾಗೂ ಪ್ರತಿ ಲೀಟರ್‌
ಹಾಲಿಗೆ ರೈತರಿಗೆ ನೀಡಲಾಗುತ್ತಿರುವ 4 ರೂ. ಪ್ರೋತ್ಸಾಹ ಧನದ 2,179 ಕೋಟಿ ರೂ. ಸಂದಾಯವಾಗಿದೆ.
2005-16ನೇ ಸಾಲಿನಲ್ಲಿ 500 ಕೋಟಿ ರೂ.ಗಿಂತ ಅಧಿಕ ಮೊತ್ತದ ವಿವಿಧ ಯೋಜನೆಗಳನ್ನು
ಅನುಷ್ಠಾನಗೊಳಿಸಲಾಗಿದೆ. 2016-17ನೇ ಸಾಲಿನಲ್ಲಿ 1,223 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳನ್ನು
ರೂಪಿಸಲಾಗಿದ್ದು, ಇದರಲ್ಲಿ 420 ಕೋಟಿ ರೂ. ವೆಚ್ಚದಲ್ಲಿ ಕನಕಪುರದಲ್ಲಿ ಮೆಗಾ ಡೇರಿ ಸ್ಥಾಪನೆ, 80 ಕೋಟಿ ರೂ.
ವೆಚ್ಚದಲ್ಲಿ ಉಡುಪಿ ಜಿಲ್ಲೆಯ ಉಪ್ಪೂರುನಲ್ಲಿ ಡೇರಿ ನಿರ್ಮಾಣ. 58 ಕೋಟಿ ರೂ. ವೆಚ್ಚದಲ್ಲಿ ಅರಕಲಗೂಡು ಭಾಗದಲ್ಲಿ ಪಶು ಆಹಾರ ಘಟಕ ಸ್ಥಾಪನೆ ಪ್ರಮುಖ ಯೋಜನೆಗಳಾಗಿವೆ ಎಂದು ಅವರು ಮಾಹಿತಿ ನೀಡಿದರು.

ರೇವಣ್ಣ ಆರೋಪ ಸುಳ್ಳು: ಕೆಎಂಎಫ್ 500 ಕೋಟಿ ರೂ. ನಷ್ಟ ಅನುಭವಿಸಿದೆ ಎಂಬ ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರ ಆರೋಪ ಅಪ್ಪಟ ಸುಳ್ಳು ಎಂದ ಅವರು, ಪ್ರಸ್ತುತ ಕೆಎಂಎಫ್ನಲ್ಲಿ ಪ್ರತಿನಿತ್ಯ 60 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಖರ್ಚಾಗಿ ಉಳಿಯುವ 3.5 ಲಕ್ಷ ಲೀಟರ್‌ ಹಾಲನ್ನು ಹಾಲಿನ ಪುಡಿಯನ್ನಾಗಿ
ಪರಿವರ್ತಿಸಲಾಗುತ್ತಿದೆ. ಹಾಲಿನ ಪುಡಿ ವರ್ಷಕ್ಕೆ ಉತ್ಪಾದನೆ ಆಗುವುದೇ 45 ಸಾವಿರ ಮೆಟ್ರಿಕ್‌ ಟನ್‌. ಇದನ್ನು ಬೇಡಿಕೆಗೆ
ತಕ್ಕಂತೆ ಮಾರುಕಟ್ಟೆಗೆ ಹಂತ-ಹಂತವಾಗಿ ಬಿಡುಗಡೆ ಮಾಡಲಾಗುತ್ತದೆ. ಇದೊಂದು ನಿರಂತರ ಪ್ರಕ್ರಿಯೆ. ಸದ್ಯ
ಕೆಎಂಎಫ್ನಲ್ಲಿ 24,977 ಮೆಟ್ರಿಕ್‌ ಟನ್‌ ಹಾಲಿನ ಪುಡಿ ದಾಸ್ತಾನು ಇದೆ. ಈ ದಾಸ್ತಾನು ಕಳೆದ 6 ತಿಂಗಳಿಂದ ಉತ್ಪಾದನೆಯಾಗಿರುವುದು. ಇದರಲ್ಲಿ 2 ಸಾವಿರ ಮೆಟ್ರಿಕ್‌ ಟನ್‌ ಹಾಲಿನ ಪುಡಿ ಗುರುವಾರವಷ್ಟೇ ಮಾರಾಟವಾಗಿದೆ.
ಹೀಗಾಗಿ ನಷ್ಟದ ಪ್ರಶ್ನೆಯೇ ಇಲ್ಲಿ ಉದ್ಭವವಾಗುವುದಿಲ್ಲ ಎಂದು ತಿಳಿಸಿದರು.
-ಉದಯವಾಣಿ

Write A Comment