ಕರ್ನಾಟಕ

ಪೇಪರ್‌ ಲೀಕ್‌ ತನಿಖೆ ನನ್ನಿಂದಲೇ ನಡೆಯಲಿ : ಕಿಮ್ಮನೆ ರತ್ನಾಕರ್‌

Pinterest LinkedIn Tumblr

kimmaneಬೆಂಗಳೂರು : ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ತನಿಖೆ ನನ್ನನ್ನೂ ಸೇರಿ ನಡೆಯಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರತ್ನಾಕರ್‌ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ 2008 ರಿಂದಲೂ ನಡೆದಿದೆ. ಈಗ ನಡೆಯುತ್ತಿರುವ ತನಿಖೆ ನನ್ನಿಂದಲೇ ನಡೆಯಲಿ.ಇದಕ್ಕೊಂದು ಅಂತಿಮ ಪರಿಹಾರ ಕಂಡುಕೊಳ್ಳಲು ನಿರ್ಧರಿಸಿದ್ದೇವೆ ಎಂದರು.

ನಿಲ್ಲದ ಉಪನ್ಯಾಸಕರ ಹೋರಾಟ

ಪಿಯುಸಿ ಪರೀಕ್ಷಾ ಬಳಿಕ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮೌಲ್ಯ ಮಾಪನ ಬಹಿಷ್ಕರಿಸಿ ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿರುವ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು ನಾವು ಉಪನ್ಯಾಸಕರ ಬೆದರಿಕೆಗೆಜಗ್ಗುವುದಿಲ್ಲ. ಮುಖ್ಯಮಂತ್ರಿಗಳು ನನಗೆ ವಿಧಿಸಿದ್ದ ಗಡಿ ಮೀರಿ ಒಂದು ಪಟ್ಟು ವೇತನ ಪರಿಷ್ಕರಿಸುವ ಭರವಸೆ ನೀಡಿದ್ದೆ.ಆದರೂ ಪ್ರತಿಭಟನೆ ಮುಂದುವರೆದಿದೆ. ನಾವು ಎಪ್ರಿಲ್‌ 12 ರ ಬಳಿಕ ಮೌಲ್ಯ ಮಾಪನಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೇವೆ.ಈ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕ ಪಡಬೇಕಾಗಿಲ್ಲ ಎಂದರು.
-ಉದಯವಾಣಿ

Write A Comment