ಕರ್ನಾಟಕ

ಇಟಲಿಯ ಪ್ರಖ್ಯಾತ ಪಾರಂಪರಿಕ ತಾಣದಲ್ಲಿ ಹಾಡುಗಳ ಚಿತ್ರೀಕರಣ ಮುಗಿಸಿದ ‘ಜಗ್ಗು ದಾದ’

Pinterest LinkedIn Tumblr

Jaggu-daada

ಬೆಂಗಳೂರು: ಇಟಲಿಯ ಪ್ರಖ್ಯಾತ ಪಾರಂಪರಿಕ ತಾಣದಲ್ಲಿ ಹಾಡುಗಳ ಚಿತ್ರೀಕರಣ ಮುಗಿಸಿರುವ ‘ಜಗ್ಗು ದಾದಾ’ ತಂಡ ಉತ್ಸಾಹದಲ್ಲಿದೆ. ಎರಡು ಹಾಡುಗಳಿಗೆ ಐದು ಪ್ರದೇಶಗಳನ್ನು ಹುಡುಕಿ, ವೆಸ್ಪಾ, ಮಟೆರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮುಗಿಸಿದೆ.

“ಇದೆ ಮೊದಲ ಬಾರಿಗೆ ಭಾರತೀಯ ಸಿನೆಮಾವೊಂದನ್ನು ಪಾಂಪೈ ನಲ್ಲಿ ಚಿತ್ರೀಕರಿಸಿರುವುದು. ಈ ಪ್ರದೇಶವನ್ನು ಬೇರೆ ಯಾವ ಸಿನೆಮಾದವರು ಪತ್ತೆ ಹಚ್ಚಿಲ್ಲ. ಇದು ನೇಪಲ್ಸ್ ಕೊಲ್ಲಿಯ ತೀರದಲ್ಲಿದ್ದು, ಅಗ್ನಿಪರ್ವತದಿಂದ ಹೊರಚಿಮ್ಮಿರುವ ಭಗ್ನವೇಶಗಳಿಂದ ಸುತ್ತುವರೆದಿದೆ. ನಾವು ಇಟಲಿ ಸರ್ಕಾರದಿಂದ ಪರವಾನಗಿ ಪಡೆದೆವು ಮತ್ತು ಅಲ್ಲಿ ಚಿತ್ರೀಕರಿಸಲು ದಿನಕ್ಕೆ ೫ ಲಕ್ಷ ನಿಡಬೇಕಿತ್ತು. ಇದು ಅಸಾಮಾನ್ಯ ಜಾಗವಾಗಿದ್ದರಿಂದ ಅದನ್ನು ಕೊಡುವುದಕ್ಕೆ ಹಿಂಜರಿಯಲಿಲ್ಲ” ಎಂದು ವಿವರಿಸುತ್ತಾರೆ ಸಿನೆಮಾದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗಡೆ.

ಚಿತ್ರೀಕರಣ ಮುಗಿಸುವುದಕ್ಕೆ ಆರು ದಿನಗಳಷ್ಟೇ ಬಾಕಿ ಇದೆ ನ್ನುವ ಹೆಗಡೆ” ಮೇನಲ್ಲಿ ವೈಭವಯುತವಾಗಿ ಆಡಿಯೋ ಬಿಡುಗಡೆ ಮಾಡಿ, ಅದೇ ತಿಂಗಳಲ್ಲಿ ಸಿನೆಮಾ ಕೂಡ ಬಿಡುಗಡೆ ಮಾಡಲಿದ್ದೇವೆ” ಎನ್ನುವ ಅವರು ಯುಗಾದಿಗೆ ವಿಶಿಷ್ಟವಾದ ಮೋಶನ್ ಪೋಸ್ಟರ್ ಕೂಡ ಬಿಡುಗಡೆ ಮಾಡುವುದಾಗಿ ತಿಳಿಸುತ್ತಾರೆ.

ಬಹುನಿರೀಕ್ಷಿತ ದರ್ಶನ್ ನಟನೆಯ ಈ ಆಕ್ಷನ್-ಹಾಸ್ಯ ಚಿತ್ರಕ್ಕೆ ಜೋಡಿಯಾಗಿ ದೀಕ್ಷಾ ಸೇಥ್ ನಟಿಸಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದು, ಎಚ್ ಸಿ ವೇಣು ಸಿನೆಮ್ಯಾಟೋಗ್ರಾಫರ್.

Write A Comment