ಕರ್ನಾಟಕ

14 ಜಿಪಂ ಅಧ್ಯಕ್ಷಗಾಧಿ ಮಹಿಳೆಯರಿಗೆ ಮೀಸಲು; ಭವಾನಿ ರೇವಣ್ಣರ ಕೈತಪ್ಪಿದ ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷಗಾಧಿ

Pinterest LinkedIn Tumblr

bhavani-revanna

ಬೆಂಗಳೂರು: ಜಿಲ್ಲಾ ಪಂಚಾಯತ್ ಚುನಾವಣೆ ಫಲಿತಾಂಶ ಹೊರಬಿದ್ದ ಸುಮಾರು ಒಂದೂವರೆ ತಿಂಗಳ ಬಳಿಕ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿಗೊಳಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ.

30 ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನಗಳ ಪೈಕಿ 15 ಸ್ಥಾನಗಳನ್ನು ಸಾಮಾನ್ಯ ವರ್ಗ, ಎಸ್ ಸಿ ಮತ್ತು ಒಬಿಸಿಗೆ 12 ಸ್ಥಾನಗಳು ಹಾಗೂ ಮೂರು ಸ್ಥಾನಗಳನ್ನು ಎಸ್ ಟಿಗೆ ಮೀಸಲಿಡಲಾಗಿದೆ. ಈ ಪೈಕಿ 14 ಅಧ್ಯಕ್ಷ ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಇನ್ನು ಮೀಸಲು ಅಸ್ತ್ರದ ಮೂಲಕ ಪ್ರತಿಪಕ್ಷಗಳು ಅಧಿಕಾರ ಹಿಡಿಯಲು ಅನುಕೂಲವಾಗದಂತಹ ತಂತ್ರವನ್ನು ರಾಜ್ಯ ಸರ್ಕಾರ ಕೆಲವೆಡೆ ಅನುಸರಿಸಿದ್ದು, ಇದರಿಂದಾಗಿ ತೀರ್ವ ಕುತೂಹಲ ಕೆರಳಿಸಿದ್ದ ಹಾಸನ ಜಿಲ್ಲಾ ಪಂಚಾಯತ್ ನಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡರ ಸೊಸೆ, ಮಾಜಿ ಸಚಿವ ಡಿ. ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಗೂ ಶಿವಮೊಗ್ಗದಲ್ಲಿ ಬಿಜೆಪಿ ಶಾಸಕ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ರನ್ನು ಜಿಪಂ ಅಧ್ಯಕ್ಷರನ್ನಾಗಿಸುವ ಕನಸು ಭಗ್ನಗೊಂಡಿದೆ.

ಹಾಸನ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲಾಗಿದ್ದು, ಬಾಗೇಶಪುರ ಕ್ಷೇತ್ರದ ಕಾಂಗ್ರೆಸ್ ನ ಶ್ವೇತಾ ದೇವರಾಜು ಅವರಿಗೆ ದೊರೆಯಲಿದೆ.

Write A Comment