ರಾಷ್ಟ್ರೀಯ

ದೆಹಲಿಯ ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

Pinterest LinkedIn Tumblr

suicide

ನವದೆಹಲಿ: ಸುಮಾರು ೨೦ ನೆ ವಯಸ್ಸಿನ ಆಸುಪಾಸಿನ ವ್ಯಕ್ತಿ ದೆಹಲಿಯ ಮೆಟ್ರೋ ಟ್ರ್ಯಾಕ್ ಮೇಲೆ ಜಿಗಿದು ಬುಧವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಪೂರ್ವ ರೋಹಿಣಿ ಮೆಟ್ರೋ ನಿಲಾಣ್ದಲ್ಲಿ ಬೆಳಗ್ಗೆ ೯:೧೬ಕ್ಕೆ ಜರುಗಿದೆ. “ಈ ವ್ಯಕ್ತಿಯ ಗುರುತನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಅವನ ಯಾವುದೇ ಗುರುತನ ಚೀಟಿ ಸಿಕ್ಕಿಲ್ಲ. ಈ ತೀವ್ರ ನಡೆಗೆ ಕಾರಣ ಏನೆಂದು ಕೂಡ ತಿಳಿದಿಲ್ಲ, ಅಲ್ಲದೆ ಆ ವ್ಯಕ್ತಿ ಯಾವುದೇ ಡೆತ್ ನೋಟ್ ಕೂಡ ಬರೆದಿಲ್ಲ” ಎಂದು ಪೋಲಿಸ್ ಉಪ ಆಯುಕ್ತ (ದೆಹಲಿ ಮೆಟ್ರೊ) ಜಿತೇಂದ್ರ ಮಣಿ ತಿಳಿಸಿದ್ದಾರೆ.

ರಿಥಾಲ ಇಂದ ಬರುತ್ತಿದ್ದ ಮೆಟ್ರೋ ರೈಲು ಗುದ್ದಿದ್ದಕ್ಕೆ ಸ್ಥಳದಲ್ಲೇ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಮಣಿ ತಿಳಿಸಿದ್ದಾರೆ.

Write A Comment