ಕರ್ನಾಟಕ

ಚಿನ್ನ ವ್ಯಾಪಾರಿಯ ₹ 38 ಲಕ್ಷ ಕದ್ದ ಆರೋಪಿ ಬಂಧನ

Pinterest LinkedIn Tumblr

hub-38-lack-teftಹುಬ್ಬಳ್ಳಿ: ಮುಂಬೈಗೆ ಚಿನ್ನದ ಖರೀದೆಗೆ ತೆರಳಿ ವಾಪಸಾಗುತ್ತಿದ್ದ ಮಂಗಳೂರು ಮೂಲದ ಚಿನ್ನದ ವ್ಯಾಪಾರಿ ಬಳಿ ಇದ್ದ ₹ 38 ಲಕ್ಷ ನಗದು ಕಳವು ಮಾಡಿದ ಆರೋಪಿಯನ್ನು ಹುಬ್ಬಳ್ಳಿ ಉಪ ನರಗ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತನಿಂದ ನಗದನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿ ಉತ್ತರ ಪ್ರದೇಶ ಮೂಲದ ಮಹಮ್ಮದ್ ಶಫೀಕ್(26). ಮಂಗಳೂರಿನ ಚಿನ್ನದ ವ್ಯಾಪಾರಿ ರವೀಂದ್ರ ಕದಂಬ ಎಂಬುವರು ಮಾರ್ಚ್ 21ರಂದು ಮಂಬೈಗೆ ಚಿನ್ನ ಖರೀದಿಗೆ ತೆರಳಿದ್ದರು. ಆದರೆ, ಚಿನ್ನ ಖರೀದಿಸಲು ಸಾಧ್ಯವಾಗಿರಲಿಲ್ಲ. ಊರಿಗೆ ಹಿಂದಿರುಗುತ್ತಿದ್ದಾಗ ಅವರ ಬಳಿ ಹಣ ಇರುವುದನ್ನು ಗಮನಿಸಿದ ಆರೋಪಿ ಅವರು ಹತ್ತಿದ್ದ ಬಸ್ಸನ್ನೇ ಹತ್ತಿ ಹಿಂಬಾಲಿಸಿದ್ದಾನೆ. ಬೆಳಗಾವಿ ಜಿಲ್ಲೆ ಕಿತ್ತೂರು ಬಳಿ ಹಣದ ಬ್ಯಾಗ್ಅನ್ನು ಕಳವು ಮಾಡಿ ಬಸ್ ಇಳಿದು ಹೋಗಿದ್ದಾನೆ.
ಈ ಸಂಬಂದ ಉಪ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಸ್‌ ನಲ್ಲಿದ್ದ ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿದ್ದ ದೃಶ್ಯ ಹಾಗೂ ಭಯದಿಂದ ಆರೋಪಿ ಬಿಸಾಕಿ ಹೋಗಿದ್ದ ಮೊಬೈಲ್ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment