ರಾಷ್ಟ್ರೀಯ

ಬಾಂಗ್ಲಾದೇಶ: 5 ಪ್ರಕರಣಗಳಲ್ಲಿ ಜಿಯಾಗೆ ಜಾಮೀನು

Pinterest LinkedIn Tumblr

Jiaಢಾಕಾ (ಪಿಟಿಐ): ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಪೆಟ್ರೊಲ್ ಬಾಂಬ್‌ ಎಸೆದ ಪ್ರಕರಣ ಸೇರಿದಂತೆ ಐದು ಪ್ರಕರಣಗಳಲ್ಲಿ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಲಿದಾ ಜಿಯಾ ಅವರಿಗೆ ಮಂಗಳವಾರ ಜಾಮೀನು ಸಿಕ್ಕಿದೆ.
ಹಲವು ಆರೋಪಗಳನ್ನು ಎದುರಿಸುತ್ತಿರುವ ಜಿಯಾ ಅವರು ಮಂಗಳವಾರ ವಿವಿಧ ನ್ಯಾಯಾಲಯಗಳಿಗೆ ಹಾಜರಾದರು.
ದೇಶದ್ರೋಹ, ಜತ್ರಾಬರಿ ಬೆಂಕಿ ದಾಳಿ, ಕೊಲೆ, ಗಟ್ಕೊ ಲಂಚ ಹಾಗೂ ಜಲಸಾರಿಗೆ ಸಚಿವ ಷಹಜಹಾನ್ ಖಾನ್ ನೇತೃತ್ವದ ಮೆರವಣಿಗೆ ಮೇಲೆ ನಾಡಾ ಬಾಂಬ್‌ ಎಸೆದ ಪ್ರಕರಣಗಳಲ್ಲಿ ಜಿಯಾ ಅವರಿಗೆ ಜಾಮೀನು ದೊರೆತಿದೆ.
ಬಾಂಗ್ಲಾದೇಶ ನ್ಯಾಷನಾಲಿಸ್ಟ್‌ ಪಾರ್ಟಿ(ಬಿಎಎನ್‌ಪಿ) ಮುಖ್ಯಸ್ಥೆ ಆಗಿರುವ 70 ವರ್ಷ ಜಿಯಾ, ಅವರಿಗೆ ಎರಡು ಪ್ರಕರಣಗಳಲ್ಲಿ ಖುದ್ದು ಹಾಜರಾತಿಯಿಂದ ವಿನಾಯ್ತಿ ದೊರೆತಿತ್ತು.
ತಮ್ಮ ಬೆಂಬಲಿಗ ವಾಹನಗಳೊಂದಿಗೆ 10:30ಕ್ಕೆ ನ್ಯಾಯಾಲಯ ಆವರಣ ತಲುಪಿದ ಜಿಯಾ ಅವರು ಐದು ಪ್ರತ್ಯೇಕ ನ್ಯಾಯಾಲಯಗಳಲ್ಲಿ ಹಾಜರಾದರು.

Write A Comment