ಕರ್ನಾಟಕ

ಯಾಕಾಗಿ ದುನಿಯಾ ವಿಜಯ್ ತಮ್ಮ ಕೈ ಮೇಲೆ ಟ್ಯಾಟ್ಯೂ ಹಾಕಿಸಿಕೊಂಡರು ಗೊತ್ತಾ..?

Pinterest LinkedIn Tumblr

viji-tattoo

ಇಷ್ಟು ದಿನ ತಮ್ಮ ನಟನೆ ಹಾಗೂ ಆ್ಯಕ್ಷನ್ ಮೂಲಕ ಸಾಕಷ್ಟು ಮಂದಿಯ ಮನಗೆದ್ದಿದ್ದ ನಟ ದುನಿಯಾ ವಿಜಯ್ ಇದೀಗ ಟ್ಯಾಟೂವತ್ತ ಮುಖಮಾಡಿದ್ದು, ಟ್ಯಾಟೂ ಮೂಲಕ ಜನರ ಗಮನ ಸೆಳೆಯಲು ಪ್ರಯತ್ನ ನಡೆಸಿದ್ದಾರೆ.

ಇದೀಗ ವಿಜಯ್ ಅವರು ತಮ್ಮ ತಾಯಿ ಹಾಗೂ ಅಭಿಮಾನಿಗಳ ಮೇಲಿನ ಪ್ರೀತಿಗಾಗಿ ಕೈಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದು. ಎಡಗೈ ಮೇಲೆ ‘ಅವ್ವ’ ಹಾಗೂ ‘ಅಭಿಮಾನಿ’ ಎಂದು ಬರೆಸಿಕೊಂಡಿದ್ದಾರೆ.

ಸಿನಿಮಾದ ಮಾಸ್ತಿ ಗುಡಿ ಚಿತ್ರದ ಸಿಬ್ಬಂದಿಗಳು ಹಾಗೂ ಮಕ್ಕಳ ಮುಂದೆಯೇ ವಿಜಯ್ ಅವರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡ ನೋವಿದ್ದರೂ ಕೂಡ ವಿಜಯ್ ತಮ್ಮ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ನನಗೆ ಜ್ವರವಿದೆ. ಆದರೆ, ಚಿತ್ರೀಕರಣವನ್ನು ಮುಂದೂಡುವುದಿಲ್ಲ. ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತೇನೆಂದು ಹೇಳಿದ್ದಾರೆ.

ಟ್ಯಾಟೂ ಹಾಕಿಸಿಕೊಳ್ಳಲು ಕಾರಣ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ನನ್ನ ಸಾಕಷ್ಟು ಅಭಿಮಾನಿಗಳು ನನ್ನ ಮುಖವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಟ್ಯಾಟೂ ಹಾಕಿಸಿಕೊಂಡು ನೋವು ತಿಂದಿದ್ದಾರೆ. ಅವರ ಪ್ರೀತಿ ಸಾಕಷ್ಟು ಆಶ್ಚರ್ಯವನ್ನುಂಟು ಮಾಡಿದ್ದರು. ಹೀಗಾಗಿ ನನಗೂ ಅಭಿಮಾನಿಗಳಿಗಾಗಿ ಹಾಗೂ ನನ್ನ ತಾಯಿಗಾಗಿ ಟ್ಯಾಟೂ ಹಾಕಿಸಿಕೊಳ್ಳಬೇಕೆಂಬ ವಿಚಾರ ಹೊಳೆಯಿದು.

ಅಭಿಮಾನಿಗಳ ಪ್ರೀತಿಗೆ ಪ್ರತಿಯಾಗಿ ಏನಾದರೂ ಕೊಡಬೇಕೆನ್ನಿಸಿತು. ಅವರಿಗೆ ಗೌರವಿಸಬೇಕೆನಿತು. ನನ್ನ ತಾಯಿ ಕೂಡ ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅಭಿಮಾನಿಗಳು ಹಾಗೂ ನನ್ನ ತಾಯಿಯಿಗೆ ಒಂದೇ ರೀತಿಯ ಪ್ರಾಮುಖ್ಯತೆಯನ್ನು ನೀಡುತ್ತೇನೆ. ಹೀಗಾಗಿ ಈ ಇಬ್ಬರ ನೆನಪು ಸದಾಕಾಲ ನನ್ನೊಂದಿಗಿರಬೇಕೆಂದು ಟ್ಯಾಟೂ ಹಾಕಿಸಿಕೊಂಡಿದ್ದೇನೆಂದು ಹೇಳಿದ್ದಾರೆ.

Write A Comment