ಕರ್ನಾಟಕ

ಸನ್ನಿ ಲಿಯೋನ್ ವಿರುದ್ಧ 100 ಕೋಟಿ ರು. ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ ಪೂಜಾ ಮಿಶ್ರಾ !

Pinterest LinkedIn Tumblr

21

ಮುಂಬೈ: ಹಿಂದಿ ಬಿಗ್​ಬಾಸ್ ಸೀಸನ್-5ನ ಸ್ಪರ್ಧಾಳು ರೂಪದರ್ಶಿ ಪೂಜಾ ಮಿಶ್ರಾ ನಟಿ ಸನ್ನಿ ಲಿಯೋನ್ ವಿರುದ್ಧ ಮುಂಬೈ ಹೈಕೋರ್ಟ್​ನಲ್ಲಿ 100 ಕೋಟಿ ರುಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಬಿಗ್​ಬಾಸ್ ರಿಯಾಲಿಟಿ ಶೋ ಮೂಲಕ ತಾವು ಪ್ರಸಿದ್ಧಿಯಾಗಿದ್ದು, ತಮ್ಮ ವಿರುದ್ಧ ಸನ್ನಿ ಲಿಯೋನ್ ಮಾಧ್ಯಮಗಳಿಗೆ ಆಕ್ಷೇಪಾರ್ಹ ಹೇಳಿಕೆ ನೀಡುತ್ತಿದ್ದಾರೆ ಎಂದು ಪೂಜಾ ಮಿಶ್ರಾ ಆರೋಪಿಸಿದ್ದಾರೆ.

ಸನ್ನಿ ಲಿಯೋನ್ ಆಕ್ಷೇಪಾರ್ಹ ಹೇಳಿಕೆಯಿಂದಾಗಿ ತಮ್ಮ ವೃತ್ತಿ ಜೀವನದಲ್ಲಿ ಹಿನ್ನಡೆ ಉಂಟಾಗಿದ್ದು, ಈಗಾಗಲೇ 70 ಲಕ್ಷ ರು. ನಷ್ಟವಾಗಿದೆ. ಮಾನಸಿಕ ಹಾಗೂ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯಾಗಿವೆ. ಹೀಗಾಗಿ 100 ಕೋಟಿ ರು. ಪರಿಹಾರ ಕೊಡಿಸಬೇಕು ಎಂದು ಮಿಶ್ರಾ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಬೇಸಿಗೆ ರಜೆ ಮುಗಿದ ನಂತರ ಜೂನ್ ನಲ್ಲಿ ಪ್ರಕರಣ ವಿಚಾರಣೆಗೆ ಬರಲಿದೆ.

Write A Comment