ಕರ್ನಾಟಕ

5 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

Pinterest LinkedIn Tumblr

3mph4ಮೈಸೂರು, ಏ.3- ಅಪರೂಪಕ್ಕೊಮ್ಮೆ ಕೆಲವರು ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡುವುದು ಸಾಮಾನ್ಯ. ಆದರೆ ಇಲೊಬ್ಬ ಮಹಾತಾಯಿ ಒಂದಲ್ಲ, ಎರಡಲ್ಲ. ಒಟ್ಟಿಗೆ ಐದು ಮಕ್ಕಳಿಗೆ ಜನ್ಮ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ.
ಛತ್ತೀಸಘಡ್‌ ನ ಸುರ್‌ಗಜ್‌ ಜಿಲ್ಲೆಯ ಬಿನಕಾರ ಎಂಬ ಗ್ರಾಮದ ಮಹೇಶ್‌ ರಾಜವಾಡೆ ಎಂಬುವರು ತಮ್ಮ ಪತ್ನಿ ಮನಿತಾಗೆ(25) ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನಿತಾಳನ್ನು ಎರಡು ದಿನಗಳ ಹಿಂದೆ ಅಂಬಿಕಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.
ನಿನ್ನೆ ಮನಿತಾ 30 ನಿಮಿಷದಲ್ಲಿ ನಾಲ್ಕು ಹೆಣ್ಣು ಹಾಗೂ ಒಂದು ಗಂಡು ಮಗು ಸೇರಿ ಒಟ್ಟು 5 ಮಕ್ಕಳಿಗೆ ಜನ್ಮ ನೀಡಿದ್ದಾರೆ. ಐವರು ನವಜಾತು ಶಿಶು ಹಾಗೂ ತಾಯಿ ಆರೋಗ್ಯವಾಗಿದ್ದಾರೆಂದು ಸರ್ಕಾರಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಐದು ಮಕ್ಕಳನ್ನು ವೈದ್ಯರು ಮುನ್ನೆಚ್ಚರಿಕೆಯಾಗಿ ಐಸಿಯುನಲ್ಲಿ ಇಟ್ಟಿದ್ದಾರೆ. ಐದು ಮಕ್ಕಳಿಗೆ ಜನ್ಮ ನೀಡಿರುವ ಮಹಾತಾಯಿಯನ್ನು ನೋಡಲು ಜನರು ಗುಂಪು ಗುಂಪಾಗಿ ಬರುತ್ತಿದ್ದಾರೆ.

Write A Comment