ಮುಂಬೈ

ಛಾಯಾಗ್ರಾಹಕರರೊಂದಿಗೆ ‘ಮುನ್ನಾಬಾಯಿ’ ಸೆಲ್ಪಿ ಖುಷಿ!

Pinterest LinkedIn Tumblr

03-sanju-webಮುಂಬೈ: ಯರವಾಡ ಕೇಂದ್ರೀಯ ಸೆರೆಮನೆಯಿಂದ ಬಿಡುಗಡೆಯಾದ ಬಳಿಕ ಇದೇ ಮೊತ್ತ ಮೊದಲ ಬಾರಿಗೆ ಇಲ್ಲಿ ನಡೆಯುತ್ತಿರುವ ಲ್ಯಾಕ್ಮೆ ಫ್ಯಾಷನ್ ವೀಕ್ ಕಾರ್ಯಕ್ರಮಕ್ಕೆ ಆಗಮಿಸಿದ ಚಿತ್ರನಟ ಸಂಜಯ್ ದತ್ ಅವರು ಛಾಯಾಗ್ರಾಹಕರಿಗೆ ಫೊಟೋಗಳಿಗಾಗಿ ಫೋಸು ಕೊಟ್ಟದ್ದು ಮಾತ್ರವೇ ಅಲ್ಲ ಅವರೊಂದಿಗೆ ಬಗೆ ಬಗೆಯಾಗಿ ಸೆಲ್ಪಿ ತೆಗೆದುಕೊಂಡು ಖುಷಿ ಖಷಿಯಾಗಿ ಕಾಲ ಕಳೆದರು.

56ರ ಹರೆಯದ ‘ಮುನ್ನಾ ಭಾಯಿ’ ಪತ್ನಿ ಮಾನ್ಯತಾ ಜೊತೆಗೆ ಎಲ್​ಎಫ್​ಡಬ್ಲ್ಯೂ ಸ್ಪ್ರಿಂಗ್/ ಸಮ್ಮರ್ 2016ನಲ್ಲಿ ನಡೆದ ವಿನ್ಯಾಸಕಾರ ಮಸಾಬಾ ಶೋ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಮಾಮೂಲಿ ನೀಲಿ ಶರ್ಟ್ ಮತ್ತು ಡೆನಿಮ್ ಧರಿಸಿ ಬಂದಿದ್ದ ದತ್ ಭಾರಿ ಉತ್ಸಾಹದಲ್ಲಿದ್ದರು. ರಾಯಲ್ ಬ್ಲೂ ಸೀರೆ ಧರಿಸಿ ಬಂದಿದ್ದ ಪತ್ನಿ ಜೊತೆಗೆ ಫೋಟೋಗಳಿಗೆ ಫೋಸು ಕೊಟ್ಟರು. ಏಕ ವ್ಯಕ್ತಿ ಚಿತ್ರಕ್ಕೆ ಛಾಯಾಗ್ರಾಹಕರು ಬೇಡಿಕೆ ಇಟ್ಟಾಗ ದತ್ ರನ್​ವೇ ಮಧ್ಯಕ್ಕೆ ಹೋಗಿ ಒಬ್ಬರೇ ನಿಂತುಕೊಂಡು ಫೋಸು ನೀಡಿದರು.

ದತ್ ಅವರನ್ನು ‘ಬಾಬಾ’ ಅಡ್ಡ ಹೆಸರಿನಿಂದ ಕರೆದ ಒಬ್ಬ ಛಾಯಾಗ್ರಾಹಕ ತನ್ನೊಂದಿಗೆ ‘ಸೆಲ್ಪಿ’ಗೆ ಕೋರಿದಾಗ, ಛಾಯಾಗ್ರಾಹಕನ ಕ್ಯಾಮರಾವನ್ನು ಸ್ವತಃ ಹಿಡಿದುಕೊಂಡು ಛಾಯಾಗ್ರಾಹಕರ ಸಮೂಹದ ಜೊತೆಗೆ ಸೆಲ್ಪಿ ತೆಗೆದುಕೊಟ್ಟರು. ಅಷ್ಟೇ ಅಲ್ಲ ನೆಲದಲ್ಲಿ ಅವರೊಂದಿಗೆ ಬಗ್ಗಿ ಕುಳಿತುಕೊಂಡು ಕೂಡಾ ಸೆಲ್ಪಿ ಕ್ಲಿಕ್ಕಿಸಿದರು.

Write A Comment