ಕರ್ನಾಟಕ

ಏಪ್ರಿಲ್‌ನಲ್ಲೇ ಸಂಪುಟ ಪುನರ್ ರಚನೆ

Pinterest LinkedIn Tumblr

siddaramyyawebಬೆಂಗಳೂರು (ಪಿಟಿಐ): ಇದೇ ತಿಂಗಳೊಳಗೆ ರಾಜ್ಯ ಸಚಿವ ಸಂಪುಟ ಪುನರ್ ರಚನೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕೂ ಮೊದಲು, ರಾಜ್ಯ ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆ ಸಂಪುಟ ಪುನರ್‌ ರಚನೆ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಬಜೆಟ್‌ ಅಧಿವೇಶನ ಗುರುವಾರ ಮುಗಿದಿದೆ.
ಈ ನಡುವೆ 3 ವರ್ಷ ಅಧಿಕಾರಾವಧಿ ಪೂರೈಸಿದ ಕನಿಷ್ಠ 25 ಸಚಿವರನ್ನು ಸಂಪುಟದಿಂದ ಕೈಬಿಡಬೇಕು ಎನ್ನುವ ಕೆಲ ಶಾಸಕರ ಆಗ್ರಹಕ್ಕೆ ಸಚಿವರಿಬ್ಬರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸಂಪುಟ ಪುನರ್ ರಚಿಸುವಂತೆ ಕೆಲ ಶಾಸಕರು ಬೇಡಿಕೆ ಮುಂದಿಟ್ಟಿದ್ದರೆ, ಕೆಲವು ಸಚಿವರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಶೀಘ್ರದಲ್ಲೇ ಅಂದರೆ, ಏಪ್ರಿಲ್‌ನಲ್ಲೇ ನಾವು ಸಂಪುಟ ಪುನರ್‌ ರಚನೆ ಮಾಡುತ್ತೇವೆ ಎಂದರು.
ಗೃಹ ಸಚಿವರಾಗಿ ಜಿ ಪರಮೇಶ್ವರ್‌ ಸೇರಿದಂತೆ ಕಳೆದ ಅಕ್ಟೋಬರ್‌ನಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟಕ್ಕೆ ನಾಲ್ವರನ್ನು ಹೊಸದಾಗಿ ಸೇರ್ಪಡೆ ಮಾಡಿಕೊಂಡಿದ್ದರು.

Write A Comment