ಕರ್ನಾಟಕ

ವಿಟಿಯು ಸಿಬ್ಬಂದಿಯಿಂದ ಪ್ರತಿಭಟನೆ

Pinterest LinkedIn Tumblr

Protಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರ್ಯಕಾರಿ ಪರಿಷತ್ತಿನ ಸದಸ್ಯ ಕರಣ ಕುಮಾರ್ ವಿಶ್ವದ್ಯಾಲಯದ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿ 50ಕ್ಕೂ ಹೆಚ್ಚು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಶನಿವಾರ ಕೆಲಸದಿಂದ ದೂರ ಉಳಿದು ಪ್ರತಿಭಟಿಸಿದರು.
ವಿಟಿಯುನಲ್ಲಿ ಉಪನ್ಯಾಸಕರ ಹಾಗೂ ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಕರಣ ಕುಮಾರ್ ರಾಜ್ಯಪಾಲರಿಗೆ ದೂರು ನೀಡಿದ್ದರು. ಶನಿವಾರ ನಡೆದ ವಿಟಿಯು ಕಾರ್ಯಕಾರಿ ಪರಿಷತ್ ಸಭೆಗೆ ಬಂದಿದ್ದ ಕರಣ ಕುಮಾರ ವಿರುದ್ಧ ಘೊಷಣೆ ಕೂಗಿ, ಪ್ರತಿಭಟಿಸಿದರು.
ಅರ್ಹತೆ ಆಧಾರದಲ್ಲೇ ನಾವೆಲ್ಲ ಎರಡು ವರ್ಷಗಳ ಹಿಂದೆ ನೇಮಕಗೊಂಡಿದ್ದೇವೆ. ನೇಮಕಾತಿಗೆ ಅನುಮೋದನೆ ನೀಡಿದ ಕಾರ್ಯಕಾರಿ ಪರಿಷತ್ ಸಭೆಯಲ್ಲಿ ಅವರು ಪಾಲ್ಗೊಂಡಿದ್ದರು. ಆಗ ಈ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಆದರೆ, ವೈಯಕ್ತಿಕ ಕಾರಣಕ್ಕೆ ಅವರು ಈಗ ಅಕ್ರಮವಾಗಿ ನೇಮಕಾತಿ ನಡೆದಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡುವ ಮೂಲಕ ವಿಶ್ವವಿದ್ಯಾಲಯದ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಉಪನ್ಯಾಸಕರು ಆರೋಪಿಸಿದರು.
ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು, ಪರಿಷತ್ತಿನ ಸಭಾಂಗಣದಲ್ಲಿ ಹೊರಗಡೆ ಧರಣಿ ಕುಳಿತ ನೌಕರರು, ಶಿಕ್ಷಕರನ್ನು ಗೌರವಿಸಿ ಎಂದು ಘೋಷಣೆಗಳನ್ನು ಕೂಗಿದರು.

Write A Comment