ಕರ್ನಾಟಕ

ಪಿಯು ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾದ್ರೆ ರಾಜಿನಾಮೆ ನೀಡುತ್ತೇನೆ: ಕಿಮ್ಮನೆ

Pinterest LinkedIn Tumblr

KIMMANE

ಬೆಂಗಳೂರು: ಒಂದು ವೇಳೆ ಮತ್ತೆ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾದ್ರೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಶುಕ್ರವಾರ ಹೇಳಿದ್ದಾರೆ.

ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಈಗಾಗಲೇ ಎರಡು ಬಾರಿ ಸೋರಿಕೆಯಾಗಿದ್ದು, ಎರಡು ಬಾರಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಇದನ್ನೆ ಅಸ್ತ್ರ ಮಾಡಿಕೊಂಡ ಪ್ರತಿಪಕ್ಷಗಳ ಶಿಕ್ಷಣ ಸಚಿವರ ರಾಜಿನಾಮೆಗೆ ಒತ್ತಾಯಿಸಿದ್ದವು.

ಇಂದು ಪಿಯು ಪರೀಕ್ಷೆ ಮೌಲ್ಯ ಮಾಪಕರ ಜೊತೆಗಿನ ಮಾತುಕತೆ ವಿಫಲವಾದ ನಂತರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಿಮ್ಮನೆ ರತ್ನಾಕರ, ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಪಿಯು ಬೋರ್ಡ್ ನಿಂದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಅನ್ಯಾಯವಾಗಿದೆ. ಅದರೂ ನಾವು ಮರು ಪರೀಕ್ಷೆ ನಡೆಸಲೇಬೇಕಾಗಿದೆ ಅನಿರ್ವಾತೆ ಇದೆ. ಹೀಗಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಪ್ರತಿಪಕ್ಷಗಳು ತಮ್ಮ ರಾಜಿನಾಮೆಗೆ ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಒಂದು ವೇಳೆ ಮತ್ತೆ ಸೋರಿಯಾದರೆ ರಾಜಿನಾಮೆ ನೀಡುವುದಾಗಿ ಹೇಳಿದರು.

Write A Comment