ಮನೋರಂಜನೆ

ಪಂದ್ಯ ಸೋತರು ಗೇಯ್ಲ್, ಮೆಕ್ಕಲಮ್ ದಾಖಲೆ ಮುರಿದ ಕೊಹ್ಲಿ

Pinterest LinkedIn Tumblr

virat-kohli-crowd-kiss

ಮುಂಬೈ: ಐಸಿಸಿ ಟಿ20 ಪಂದ್ಯಾವಳಿಯ ಎರಡನೇ ಸೆಮಿಫೈನಲ್ ಮಹತ್ವದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಸೋತರು ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರ ದಾಖಲೆಗಳು ಮಾತ್ರ ಮುಂದುವರೆದಿವೆ.

ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಜೇಯ 89 ರನ್ ಸಿಡಿಸಿದ್ದಾರೆ. ಇದರೊಂದಿಗೆ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಯ್ಲ್ ಹಾಗೂ ನ್ಯೂಜಿಲೆಂಡ್ ನ ಬೆಂಡಮ್ ಮೆಕ್ಕಲಮ್ ಅವರ 15 ಬಾರಿ ಸಿಡಿಸಿದ್ದ 50ಕ್ಕೂ ಹೆಚ್ಚು ರನ್ ದಾಖಲೆಯನ್ನು ಮುರಿದಿದ್ದಾರೆ.

ಕೊಹ್ಲಿ ಅವರು ಎರಡನೇ ಬಾರಿಗೆ ಅಜೇಯ 50ಕ್ಕೂ ಹೆಚ್ಚು ರನ್ ಗಳಿಸಿರುವುದು. 2016ರ ಜನವರಿಯಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಡಿಲೇಡ್ ನಲ್ಲಿ ಪಂದ್ಯದಲ್ಲಿ ಕೊಹ್ಲಿ ಅಜೇಯ 90 ರನ್ ಗಳಿಸಿದ್ದರು. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ 89 ರನ್ ಸಿಡಿಸುವ ಮೂಲಕ 16 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ.

ಕಳೆದ 16 ಇನ್ನಿಂಗ್ಸ್ ನಲ್ಲಿ ಕೊಹ್ಲಿ 86.33ರ ಸ್ಟ್ರೈಕ್ ರೈಟ್ ನಲ್ಲಿ ಒಟ್ಟಾರೆ 777 ರನ್ ಗಳಿಸಿದ್ದಾರೆ. ಇದರಲ್ಲಿ 9 ಅರ್ಧ ಶತಕ ಕೂಡಿವೆ.

Write A Comment