ಕರ್ನಾಟಕ

ವಕ್ಫ್-ಗೌರ್ನರ್ ಗಡುವು: ಸರ್ಕಾರದ ವಿವರಣೆಗೆ 24 ಗಂಟೆ ಕಾಲಾವಕಾಶ

Pinterest LinkedIn Tumblr

vajubhai

ಬೆಂಗಳೂರು: ರಾಜ್ಯದ ವಕ್ಫ್ ಆಸ್ತಿ ಕಬಳಿಕೆ ಬಿಕ್ಕಟ್ಟು ಸೃಷ್ಟಿಸಿವೆ. ಈ ವಿಚಾರ ರಾಜಭವನದ ಅಂಗಳವನ್ನು ತಲುಪಿದ್ದು, ರಾಜ್ಯಪಾಲರು 24 ಗಂಟೆಯೊಳಗೆ ವರದಿಯನ್ನು ತಮಗೆ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀ‌ಡಿದ್ದಾರೆ.

ಇದರಿಂದ ಮುಜುಗರಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ 48 ಗಂಟೆಯೊಳಗೆ ವರದಿಯನ್ನು ಸಲ್ಲಿಸುವುದಾಗಿ ಭರವಸೆ ನೀಡಿದೆ.
ವಕ್ಫ್ ಆಸ್ತಿ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ವರದಿಯನ್ನು ಮಂಡಿಸದೆ ಇರುವುದು ಸಾಂವಿಧಾನಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ರಾಜ್ಯಪಾಲರು ಕಳವಳ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸದನದಲ್ಲಿ ವರದಿ ಮಂಡಿಸದ ಸರ್ಕಾರ ರಾಜ್ಯಪಾಲರ ಆದೇಶದಂತೆ ಅವರಿಗೆ ವರದಿಯನ್ನು 48 ಗಂಟೆಯೊಳಗೆ ಸಲ್ಲಿಸುವುದಾಗಿ ಹೇಳಿದೆ. ಸರ್ಕಾರ ಸಲ್ಲಿಸಿದ ವರದಿಯನ್ನು ಆಧರಿಸಿ ರಾಜ್ಯಪಾಲರು ಕೈಗೊಳ್ಳುವ ಕ್ರಮವು ತೀವ್ರ ಕುತೂಹಲ ಕೆರಳಿಸಿದೆ.

ವಕ್ಫ್ ಆಸ್ತಿ ದುರ್ಬಳಕೆ ಕುರಿತಂತೆ ವಿಧಾನ ಪರಿಷತ್ತಿನಲ್ಲಿಂದು ಕಳೆದ 4-6 ದಿನಗಳಿಂದ ಪ್ರತಿಧ್ವನಿಸುತ್ತಿದೆ. ಅನ್ಪರ್ ಮಾಣ್ಪಾಡಿ ಅವರ ವರದಿಯನ್ನು ಮಂಡಿಸಲೇಬೇಕೆಂದು ಪ್ರತಿಪಕ್ಷಗಳಾದ ಬಿಜೆಪಿ- ಜೆ‌ಡಿಎಸ್ ಪಟ್ಟು ಹಿಡಿದು ಧರಣಿಯನ್ನು ನಿರಂತರವಾಗಿ ನಡೆಸಿವೆ.

ವಕ್ಫ ಆಸ್ತಿ ಕಬಳಿಕೆ ಪ್ರಕರಣದಲ್ಲಿ ರಾಜ್ಯದ ಹಲವಾರು ಕಾಂಗ್ರೆಸ್ ನಾಯಕರ ಪಾತ್ರವಿದೆ ಎಂಬುದನ್ನು ಸೂಕ್ಷ್ಮವಾಗಿ ಅರಿತಿರುವ ಬಿಜೆಪಿ ನಾಯಕರು ಈ ವಿಚಾರವನ್ನು ಇಷ್ಟಕ್ಕೆ ಅಂತ್ಯಗೊಳಿಸಲು ಬಿಡದೆ ರಾಜಭವನಕ್ಕೂ ದೂರು ಕೊಂಡೊಯ್ದಿರುವುದು ಸರ್ಕಾರ ಒಂದು ರೀತಿಯಲ್ಲಿ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ.

ವರದಿಯನ್ನು ಸದನದಲ್ಲಿ ಮಂಡಿಸುವಂತೆ ರೂಲಿಂಗ್ ನೀಡಿದ್ದರೂ ಸರ್ಕಾರ ವರದಿ ಮಂಡನೆಗೆ ಹಿಂದೇಟು ಹಾಕುವ ಮೂಲಕ ತಮ್ಮ ಆದೇಶಕ್ಕೆ ಬೆಲೆ ಕೊಡದ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿರುವ ಸಭಾಪತಿ ಡಿ.ಎಚ್. ಶಂಕರಮೂರ್ತಿಯವರು ರಾಜ್ಯಪಾಲರನ್ನು ಭೇಟಿ ಮಾಡಿ ವರದಿ ಸಂಬಂಧದ ಎಲ್ಲಾ ವಿಷಯಗಳನ್ನು ವಿವರವಾಗಿ ತಿಳಿಸಿರುವುದು ಸರ್ಕಾರಕ್ಕೆ ಇನ್ನಷ್ಟು ಮುಜುಗರವನ್ನು ತಂದಿದೆ.
ಈ ಮಧ್ಯೆ ಬಿಜೆಪಿ- ಜೆಡಿಎಸ್ ಸದಸ್ಯರು ಕೂಡ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ದೂರು ನೀಡಿದ್ದಾರೆ.

Write A Comment