ಕರ್ನಾಟಕ

ರಜನಿಕಾಂತ್‌ಗೆ ಧರ್ಮಸಂಕಟ !

Pinterest LinkedIn Tumblr

rajinikanth

ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಚಿತ್ರಗಳು ಬಿಡುಗಡೆ ಆದಾಗ ಚಿತ್ರದ ಪೋಸ್ಟರ್‌ಗಳ ಮೇಲೆ ಬಕೆಟ್‌ಗಟ್ಟಲೇ ಹಾಲು ಸುರಿಯುವ ಅಭಿಮಾನಿಗಳ ಹುಚ್ಚಾಟದ ಕ್ರಮ ಇದೀಗ ಕೋರ್ಟ್ ಮೆಟ್ಟಲು ಏರಿದೆ.

ಹೀಗೆ ಮಾಡುವುದರಿಂದ ಸಾವಿರಾರು ಲೀಟರ್ ಹಾಲು ಅನಗತ್ಯವಾಗಿ ಪೋಲಾಗುತ್ತಿದೆ ಎಂದು ದೂರಿ ನಾಗರಿಕರೊಬ್ಬರು ನ್ಯಾಯಾಲಯಕ್ಕೆ ಮೊರೆ ಹೊಕ್ಕಿದ್ದಾರೆ.

ಈ ರೂಢಿಯನ್ನು ನಿಷೇಧಿಸುವಂತೆ ಆಗ್ರಹಪಡಿಸಿ ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದಾರೆ.

ರಜನಿಕಾಂತ್ ಸೇರಿದಂತೆ ಅನೇಕ ಜನಪ್ರಿಯ ನಟರ ಚಿತ್ರಗಳು ಬಿಡುಗಡೆಯಾದಾಗಲೆಲ್ಲಾ ಅಭಿಮಾನಿಗಳು ಈ ಚಿತ್ರಗಳ ಭಿತ್ತಿಫಲಕಗಳಿಗೆ ನೂರಾರು ಲೀಟರ್ ಹಾಲು ಎರಚುವುದುಂಟು.

ಆದರೆ, ಈ ಕ್ರಮವು ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಲ್ಲ. ನೆರೆಯ ಆಂಧ್ರಪ್ರದೇಶ ಹಾಗೂ ಆಂಧ್ರಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಪ್ರದೇಶಗಳಲ್ಲೂ ಇಂಥಹ ರೂಢಿ ಕಂಡುಬಂದಿದೆ.

Write A Comment