ಕರ್ನಾಟಕ

ಸದನದಲ್ಲಿ ಸೀರೆ ಬಿಚ್ಚಬೇಡಿ: ಶಾಸಕ ಕಾರಜೋಳಾಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸಲಹೆ

Pinterest LinkedIn Tumblr

Newly elected speaker Kagodu Timmappa during Assembly Session at Vidhana Soudha in Bangalore on Friday. –KPN

ವಿಧಾನಸಭೆ: ವಿಧಾನಸಭೆಯ ಕಲಾಪದ ವೇಳೆ ಸೀರೆ ಬಿಚ್ಚಲು ಮುಂದಾದ ಬಿಜೆಪಿ ಹಿರಿಯ ಶಾಸಕ ಗೋವಿಂದ ಕಾರಜೋಳಾಗೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೀರೆ ಬಿಚ್ಚುವುದು ಬೇಡ ಎಂದು ಸಲಹೆ ನೀಡಿದರು.

ವಿಧಾನಸಭೆ ಕಲಾಪಕ್ಕೆ ಸೀರೆ ತಂದಿದ್ದ ಶಾಸಕ ಗೋವಿಂದ ಕಾರಜೋಳ ಅವರು ಇನ್ನೇನು ಸೀರೆ ಬಿಚ್ಚಬೇಕು ಎನ್ನುವಷ್ಟರಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್ ಅವರು ಈ ರೀತಿ ಸಲಹೆ ನೀಡಿದರು.

ಸದನಕ್ಕೆ ಸೀರೆ ಯಾಕೆ ತಂದಿದ್ದರು ಎಂಬ ಎಲ್ಲರ ಕುತೂಹಲದ ಪ್ರಶ್ನೆಗೆ ಉತ್ತರಿಸಿದ ಕಾರಜೋಳ, ಅಂಗನವಾಡಿ ಸಹಾಯಕಿಯರಿಗೆ ಪ್ರತಿ ವರ್ಷ ಎರಡು ಸೀರೆ ಕೊಡಲು ಸರ್ಕಾರ ಯೋಜನೆ ರೂಪಿಸಿದ್ದು. ಪ್ರತಿ ಸೀರೆಗೆ ರು.300 ರಂತೆ 2.60 ಲಕ್ಷ ಸೀರೆಗಳನ್ನು ಖರೀದಿಸಿದೆ. ಸರ್ಕಾರ ಖರೀದಿಸಿದ ಸೀರೆಗಳು ಅತ್ಯಂತ ಕಳಪೆ ಮಟ್ಟದಿಂದ ಕೂಡಿವೆ. ಮಾರುಕಟ್ಟೆಯಲ್ಲಿ ರುಪಾಯಿ 70 ರಿಂದ 80 ರುಪಾಯಿಗೆ ಈ ಸೀರೆಗಳು ಸಿಗುತ್ತವೆ. ಆದರೆ ಸರ್ಕಾರ ಖರೀದಿ ಮಾಡಿದ ದರವನ್ನು ನೋಡಿದರೆ ಇದರಲ್ಲಿ ಏನೋ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.

Write A Comment