ಕರ್ನಾಟಕ

ಡಿಕೆ ರವಿ ತಾಯಿಗೆ ನೆರವಾದ ವಾಟ್ಸಾಪ್ ಗ್ರೂಪ್

Pinterest LinkedIn Tumblr

ravi

ತುಮಕೂರು: ನಿಗೂಢವಾಗಿ ಸಾವನ್ನಪ್ಪಿದ ಐಎಎಸ್ ಅಧಿಕಾರಿ ಡಿಕೆ ರವಿಯವರ ತಾಯಿ ಗೌರಮ್ಮನವರಿಗೆ ವಾಟ್ಸಾಪ್ ಗ್ರೂಪ್ ನೆರವಾಗಿದೆ.

ಡಿಕೆ ರವಿ ಅವರ ತಾಯಿ ಗೌರಮ್ಮನವರ ಸ್ಥಿತಿ ಬಗ್ಗೆ ಅನುಕಂಪ ತೋರಿದ ಕೆಲವರು ವಾಟ್ಸಾಪ್ ಮೂಲಕ ಗೌರಮ್ಮ ನೆರವಿಗೆ ಧಾವಿಸಿದ್ದಾರೆ.

ಸುಂದರ್ ರಾಜ್ ನಾಯ್ಕ್ ಮತ್ತು ಮಾರುತಿ ಎಂಬುವವರು ಗೌರಮ್ಮನವರಿಗೆ ನೆರವಾಗಲು ನೆನೆಪು ಎಂಬ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದಾರೆ. ಈ ಗ್ರೂಪ್ ಗೆ ಸೇರ್ಪಡೆಯಾಗುತ್ತಿರುವ ಪ್ರತಿ ಸದಸ್ಯರು ಗೌರಮ್ಮನವರಿಗೆ ಹಣದ ಸಹಾಯ ಮಾಡುತ್ತಿದ್ದಾರೆ.

ಈ ಗ್ರೂಪ್ ನಲ್ಲಿ 47 ಸದಸ್ಯರಿದ್ದು, ಅವರಿಂದ ರು.5,500 ಹಣ ಸಹಾಯವಾಗಿದೆ. ಈ ಹಣವೂ ನೇರವಾಗಿ ಹುಲಿಯೂರುದುರ್ಗಾದಲ್ಲಿರುವ ಗೌರಮ್ಮನವರ ಸ್ಟೇಟ್ ಬ್ಯಾಂಕ್ ಖಾತೆಗೆ ರವಾನೆಯಾಗುತ್ತಿದೆ.

ಈ ಕುರಿತು ಪ್ರತಿಕ್ರಯಿಸಿದ ನಾಯ್ಕ್, ಮಗನ ಪುಣ್ಯತಿಥಿಗೆ ಮಾಂಗಲ್ಯ ಸರ ಮಾಡಿ ಅದರಿಂದ ಬಂದ ಹಣದಿಂದ ತಿಥಿಕಾರ್ಯ ಮಾಡಿರುವುದನ್ನು ಕಂಡು ಬೇಸರ ತಂದಿತು. ಹಾಗಾಗಿ, ಗೌರಮ್ಮನವರಿಗೆ ನೆರವಾಗಬೇಕು ಎಂದು ನಿರ್ಧರಿಸಿ ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದವು. ಅವರ ನೆರವಿಗೆ ಸಾಕಷ್ಟು ಮಂದಿ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಡಿಕೆ ರವಿ ಸಾವು ತನಿಖೆ ಕುರಿತು ಪ್ರತಿಭಟನೆ ನಡೆಸದಂತೆ ಡಿಕೆ ರವಿ ಕುಟುಂಬದ ಸದಸ್ಯರಿಗೆ ಬೆದರಿಕೆ ಬಂದಿದ್ದು, ಬಿಗಿ ಪೊಲೀಸ್ ಭದ್ರತೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Write A Comment